ನೆಲ್ಯಾಡಿ ಸಂತ ಅಲ್ಫೋನ್ಸ, ಆರ್ಲ ಸೈಂಟ್ ಮೇರಿಸ್ ಚರ್ಚ್‌ಗಳಲ್ಲಿ ಸಂತಜೋಸೆಫ್ ಹಬ್ಬ, ಪಿತೃವಂದನಾ ಕಾರ್ಯಕ್ರಮ

0

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಎರಡು ಪ್ರಮುಖ ಚರ್ಚ್‌ಗಳಾದ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ಮತ್ತು ಆರ್ಲ ಸೈಂಟ್ ಮೇರಿಸ್ ಚರ್ಚ್‌ನಲ್ಲಿ ಸಂತಜೋಸೆಫ್ ಹಬ್ಬ ಹಾಗೂ ಪಿತೃವಂದನಾ ಕಾರ್ಯಕ್ರಮ ವಿವಿಧ ಧಾರ್ಮಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳ ಮೂಲಕ ನಡೆಯಿತು.


ಪೂಜಾವಿಧಿ ವಿಧಾನಗಳೊಂದಿಗೆ ಕಾರ್ಯಕ್ರಮ ನಡೆಯಿತು. ಮನೋರಂಜನಾ ಕ್ರೀಡೆಗಳಲ್ಲಿ ಹಿರಿಯ-ಕಿರಿಯರು ಪಾಲ್ಗೊಂಡಿದ್ದರು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಧರ್ಮಗುರು ರೆ.ಫಾ.ಶಾಜಿ ಮಾಥ್ಯು ಅವರು ಮಾತನಾಡಿ, ಮನೆಯಲ್ಲಿ ತಾಯಂದಿರಿಗೆ ವಿಶೇಷ ಆದ್ಯತೆ, ಗೌರವ ಕೊಡುವ ಪರಿಪಾಠ ನಮ್ಮ ಸಂಸ್ಕೃತಿಯಲ್ಲಿದೆ. ಅದೇ ರೀತಿಯಲ್ಲಿ ಸಮಾಜ ಮತ್ತು ಕುಟುಂಬ ನಿರ್ವಹಣೆಯಲ್ಲಿ ತಂದೆಯರ ಪಾತ್ರವನ್ನು ಗೌರವಪೂರ್ವಕವಾಗಿ ನೋಡಬೇಕೆಂದು ಹೇಳಿದರು.

LEAVE A REPLY

Please enter your comment!
Please enter your name here