ಪುತ್ತೂರು: ಜೊಲ್ಲು ಸುರಿಸುವ ನಾಯಿಯೊಂದು ಸಿಕ್ಕಸಿಕ್ಕಲ್ಲಿ ಭಕ್ತರಿಗೆ ಕಚ್ಚಿದ ಘಟನೆ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಮಾ.27ರಂದು ನಡೆದಿದೆ.
ಬಿಳಿ ಬಣ್ಣದ ಸಣ್ಣ ನಾಯಿ ದೇವಳದ ವಠಾರದಲ್ಲಿ ಜೊಲ್ಲು ಸುರಿಸಿಕೊಂಡಿದ್ದು ಆರಂಭದಲ್ಲಿ ದೊಡ್ಡ ನಾಯಿಗೆ ಕಚ್ಚಿದೆ. ಬಳಿಕ ಇಬ್ವರು ವ್ಯಕ್ತಿಗಳಿಗೆ ಕಚ್ಚಿದ್ದು, ಬಾಲಕಿಯೊಬ್ಬಳ ಮೇಲೆ ಹಾರಿ ಬಟ್ಟೆಯನ್ನು ಹರಿದು ಹಾಕಿದೆ. ದೇವಳದ ಭದ್ರತಾ ಸಿಬ್ಬಂದಿಗಳನ್ನು ನಾಯಿಯನ್ನು ವಠಾರದಿಂದ ಓಡಿಸಿದರೂ ಮತ್ತೆ-ಮತ್ತೆ ವಠಾರದ ಬಳಿಯೇ ಸುತ್ತುತ್ತಿದೆ. ಈ ಕುರಿತು ಭಕ್ತರು ಎಚ್ಚರಿಕೆಯಿಂದ ಇರುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ತಿಳಿಸಿದ್ದಾರೆ.