ಪುತ್ತೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಜೀರ್ಣೊದ್ದಾರ ಬ್ರಹ್ಮಕಲಶೋತ್ಸವದ ಆರಂಭದ ದಿನವಾದ ಮಾ.27ರಂದು ಪ್ರಾಸಾದ ಪರಿಗ್ರಹದ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದೇರೆಬೈಲು ಶಿವಪ್ರಸಾದ ತಂತ್ರಿಗಳು ಪ್ರಧಾನ ವಾಸ್ತುಶಿಲ್ಪಿ ಎಸ್.ಎಂ.ಪ್ರಸಾದ ಮುನಿಯಂಗಳ ಹಾಗೂ ವಾಸ್ತು – ಇಂಜಿನಿಯರ್ ಆಗಮ ಪ್ರವೀಣ ಆಗಿರುವ ಪುತ್ತೂರು ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರನ್ನು ಕ್ಷೇತ್ರದ ವತಿಯಿಂದ ಶಾಲು ಹೊದಿಸಿ ಸನ್ಮಾನ ಪತ್ರ ಪ್ರದಾನಿಸಿ ಗೌರವಿಸಲಾಯಿತು.

2009ರಿಂದ ದೇವಳದ ಜೀರ್ಣೋದ್ದಾರ ಕಾರ್ಯಗಳು ಆರಂಭಗೊಂಡಿತ್ತು. 2014ರಿಂದ ದೇವಳಕ್ಕೆ ಪ್ರದಾನ ವಾಸ್ತು ಶಿಲ್ಪಿಗಳಾಗಿ ಎಸ್.ಎಮ್.ಪ್ರಸಾದ್ ಮತ್ತು ಅವರ ಶಿಷ್ಯ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಅವರು ಕಾರ್ಯ ನಿರ್ವಹಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ರಾತ್ರಿಯಿಂದ ಬೆಳಗ್ಗಿನ ತನಕ ಪಿ.ಜಿ.ಜಗನ್ನಿವಾಸ ರಾವ್ ಅವರು ಮತ್ತು ಪುತ್ತೂರಿನ ಕರಸೇವಕರು ಗರ್ಭಗುಡಿಯ ಪ್ರಮುಖ ಕೆಲಸ ನಿರ್ವಹಿಸಿದ್ದಾರೆ. ಇದೀಗ ದೇವಳದ ಬ್ರಹ್ಮಕಲಶೋತ್ಸವದ ಅರಂಭದ ದಿನದಲ್ಲಿ ದೇವಳದ ಗರ್ಭಗುಡಿಯ ಮುಂದೆ ವಾಸ್ತು ಶಿಲ್ಪಿಗಳನ್ನು ಶ್ರೀ ದೇವರ ಪ್ರಸಾದದೊಂದಿಗೆ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಮಾಣಿಲ ಶ್ರೀಧಾಮದ ಮೋಹನದಾಸ್ ಪರಮಹಂಸ ಸ್ವಾಮೀಜಿ, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ಎಸ್ ರಾವ್, ಪ್ರ.ಕಾರ್ಯದರ್ಶಿ ಜಯದೇವ ಖಂಡಿಗೆ, ಗೌರವಾಧ್ಯಕ್ಚ ಎಡಕ್ಕಾನ ಮಹಾಬಲ ಭಟ್, ಪವಿತ್ರಪಾಣಿ ರತನ್ ಕುಮಾರ್ ಕಾಮಡ, ಕಾರ್ಯಾಧ್ಯಕ್ಷ ಮಂಜನಾಥ ಕಾಮತ್, ಕಾರ್ಯದರ್ಶಿ ಮುರಳಿ ಗಟ್ಟಿ,ಸಂತೋಷ್, ಪ್ರಧಾನ ಅರ್ಚಕ ಶ್ರೀ ಕೃಷ್ಣ ಪಾದ್ಯಾಯರು, ಮೊದಲಾದವರು ಉಪಸ್ಥಿತರಿದ್ದರು.