ಕಾವು: ಕಾವು ಶ್ರೀ ಪಂಚಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಮಾ.26ರ ಶ್ರೀದೇವರ ಅಮ್ಚಿನಡ್ಕ ಪೇಟೆ ಸವಾರಿಯ ಸಂದರ್ಭದಲ್ಲಿ ಕಾವು ಪಂಚವಟಿನಗರದಲ್ಲಿ ನಡೆದ ಸಾರ್ವಜನಿಕ ಕಟ್ಟೆ ಪೂಜೆಯ ಪ್ರಯುಕ್ತ ಪಂಚವಟಿ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಸಂಗೀತ ರಸಮಂಜರಿ-ಪಂಚವಟಿ ಸಂಭ್ರಮ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಭಜನಾ ಕಾರ್ಯಕ್ರಮ:
ಸಾರ್ವಜನಿಕ ಕಟ್ಟೆಪೂಜೆಯ ಮುನ್ನ ಸಂಜೆ ಕಟ್ಟೆಯ ಬಳಿಯಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಕೃಷಿಕ, ವಾಸ್ತುಸಲಹೆಗಾರರೂ ಆಗಿರುವ ಗಣೇಶ್ ರೈ ಗುತ್ತುರವರು ದೀಪ ಬೆಳಗಿಸಿ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಮಾಣಿಯಡ್ಕ ದುರ್ಗಾವಾಹಿನಿ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು.ಕಾರ್ಯಕ್ರಮದ ಸಂದರ್ಭ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಂಗೀತ ರಸಮಂಜರಿ:
ಪಂಚವಟಿನಗರದ ಪಂಚವಟಿ ಫ್ರೆಂಡ್ಸ್‌ನ ಆಶ್ರಯದಲ್ಲಿ ಖ್ಯಾತಗಾಯಕ ಗಾಯಕಿಯರ ಸಮಾಗಮದಲ್ಲಿ ರಾಗಸಂಗಮ ಮೆಲೋಡೀಸ್ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ-ಪಂಚವಟಿ ಸಂಭ್ರಮ ಮನರಂಜಿಸಿತು.
ಸಾರ್ವಜನಿಕ ಕಟ್ಟೆ ಪೂಜೆ:
ಕಾವು ಶ್ರೀದೇವರ ಅಮ್ಚಿನಡ್ಕ ಪೇಟೆ ಸವಾರಿಯ ಸಂದರ್ಭದಲ್ಲಿ ಕಾವು ಪಂಚವಟಿನಗರದ ಸಾರ್ವಜನಿಕ ಕಟ್ಟೆಗೆ ಬಂದು ಕಟ್ಟೆ ಪೂಜೆ ನಡೆಯಿತು.
ವಿದ್ಯುದ್ಧಿಪಗಳಿಂದ ಕಂಗೊಳಿಸಿದ ಪಂಚವಟಿನಗರ:
ಸಾರ್ವಜನಿಕ ಕಟ್ಟೆಪೂಜೆ ಮತ್ತು ಪಂಚವಟಿ ಸಂಭ್ರಮದ ಸಲುವಾಗಿ ಕಾವು ಪಂಚವಟಿ ನಗರದ ಸುತ್ತ ವಿದ್ಯುದ್ಧಿಪ, ಕೇಸರಿ ಬಂಟಿಂಗ್ಸ್, ಕೇಸರಿ ಪತಾಕೆ, ತಳಿರು ತೋರಣಗಳಿಂದ ಶೃಂಗಾರ ಮಾಡಲಾಗಿತ್ತು. ನೆರೆದಿದ್ದ ಜನರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಪಂಚವಟಿ ಫ್ರೆಂಡ್ಸ್‌ನ ಪದಾಧಿಕಾರಿಗಳು, ಸದಸ್ಯರುಗಳು, ಸ್ಥಳೀಯ ವರ್ತಕರು, ಅಟೋರಿಕ್ಷಾ ಚಾಲಕ-ಮಾಲಕರು ಸೇರಿದಂತೆ ಸಾವಿರಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು.