ʼಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ನೀರನ್ನು ಮಿತವಾಗಿ ಬಳಸಿʼ : ವಿಟ್ಲಪಡ್ನೂರು  ಗ್ರಾಮ ಸಭೆಯಲ್ಲಿ ಅಧ್ಯಕ್ಷ  ಜಯಂತ್ ಸಿ.ಹೆಚ್ 

0

ವಿಟ್ಲ:  ವಿಟ್ಲಪಡ್ನೂರು  ಗ್ರಾಮ ಪಂಚಾಯತ್ ನ  2024-25ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯನ್ನು ಗ್ರಾಮ ಪಂಚಾಯತ್ ನ ಸಭಾಭವನದಲ್ಲಿ   ಪಂಚಾಯತ್ ಅಧ್ಯಕ್ಷರಾದ  ಜಯಂತ ಪಿ. ರವರ ಅದ್ಯಕ್ಷತೆ  ಹಾಗೂ ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಖಾತರಿ ಯೋಜನೆ  ತಾಲೂಕು ಪಂಚಾಯತ್  ಬಂಟ್ವಾಳ ಇವರ ಮಾರ್ಗದರ್ಶನದಂತೆ ನಡೆಯಿತು.

 ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ತಮ್ಮ ತಮ್ಮ  ಇಲಾಖಾ ಸವಲತ್ತುಗಳ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಜಯಂತ ಪಿ ರವರು  ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ಮಾತನಾಡಿ, ನೇರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶ ಎಂದು ತಿಳಿಸುತ್ತಾ ಗ್ರಾಮಸ್ಥರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು  ಕುಡಿಯುವ ನೀರನ್ನು ಮಿತವಾಗಿ ಬಳಸಿ ಹೆಚ್ಚಿನ ನೀರು ಪೋಲಾಗುವುದನ್ನು ನಿಲ್ಲಿಸಬೇಕು.  ಬೀದಿ ದೀಪಗಳ ಬಳಕೆ ಮತ್ತು ಅದು ಅನಾವಶ್ಯಕವಾಗಿ ಉರಿಯುತ್ತಿದ್ದಲ್ಲಿ ತಕ್ಷಣ ಅದರ ಸ್ವಿಚ್ ಆಫ್ ಮಾಡಿ  ವಿದ್ಯುತ್ ನ್ನು ಉಳಿತಾಯ ಮಾಡುವಲ್ಲಿ ಸಹಕರಿಸಬೇಕು. ಪಂಚಾಯತ್ ಗೆ ಸಲ್ಲಿಸತಕ್ಕ ಆಸ್ತಿ  ತೆರಿಗೆಯನ್ನು ಪಾವತಿಸಿ ಸಹಕರಿಸಬೇಕೆಂದು ಹೇಳಿದರು.

ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ  ಪ್ರೇಮಲತಾ, ಸದಸ್ಯರುಗಳಾದ ರೇಷ್ಮಾ ಶಂಕರಿ ಬಳಿಪಗುಳಿ,‌ರವೀಶ್ ಶೆಟ್ಟಿ ಕರ್ಕಳ, ಜಯಭಾರತಿ,ಹರಿ ಕಿಶೋರ್ , ಮೈಮೂದ್, ನೆಬಿಸ, , ಕೆ ರೇಖಾ, ಹರ್ಷದ್, ಸಂದೇಶ್ ಶೆಟ್ಟಿ ನಾಗೇಶ್ ಕುಮಾರ್, ಜಯಲಕ್ಷ್ಮಿ, ಅಮಿತ ಮೊದಲಾದವರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಶೈಲಡೋಣುರ ಸ್ವಾಗತಿಸಿದರು.   ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here