ಕಾವು: ಮಾಡ್ನೂರು ಗ್ರಾಮದ ಕಾವು ಬರೆಕರೆ ಮನೆಯಲ್ಲಿ ಮಾ.29ರಂದು ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ಮಹಾದೇವೀ ಲಲಿತೋಪಾಖ್ಯಾನ ಯಕ್ಷಗಾನ ಬಯಲಾಟವು ಬರೆಕರೆ ಮನೆಯವರ ಸೇವಾರೂಪವಾಗಿ ನಡೆಯಲಿದೆ.
ಸಂಜೆ 5 ಗಂಟೆಗೆ ಸಭೆ, ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ವೇ.ಮೂ.ರವಿಶಂಕರ ಭಟ್ ಕಲ್ಲುಕುಟ್ಟಿಮೂಲೆ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವನಾಥ ಭಟ್ ಪಟ್ಟಾಜೆ, ಕಾವು ಸುಬ್ರಾಯ ಬಲ್ಯಾಯರವರು ಉಪಸ್ಥಿತಿ ವಹಿಸಲಿದ್ದಾರೆ. ಸರ್ಪಂಗಳ ಈಶ್ವರ ಭಟ್, ಮಹಾಬಲ ಕಲ್ಮಡ್ಕ, ಮುಂಡಾಜೆ ಸದಾಶಿವ ಶೆಟ್ಟಿ, ಬಾಬು ಗೌಡ ಚಾರ್ಮಾಡಿಯವರಿಗೆ ಸನ್ಮಾನ ನಡೆಯಲಿದೆ.
ಸಂಜೆ ಗಂಟೆ 6ಕ್ಕೆ ಚೌಕಿ ಪೂಜೆ ನಡೆದು ಯಕ್ಷಗಾನ ಆರಂಭಗೊಳ್ಳಲಿದೆ. ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಬರೆಕರೆ ಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.