ಪುತ್ತೂರು: ಪುತ್ತೂರು ಉಪ ಖಜಾನೆಯ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಕಲ್ಪನಾರವರಿಗೆ ಮಾ.29ರಂದು ಸರ್ಕಾರಿ ನೌಕರರ ಸಂಘ ವತಿಯಿಂದ ಅವರ ಕಚೇರಿಗೆ ತೆರಳಿ ಸನ್ಮಾನಿಸಿ, ಗೌರವಿಸಿದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ಕಾರ್ಯದರ್ಶಿ ಅಬ್ರಹಾಂ ಎಸ್,ಎ., ಕಾರ್ಯಾಧ್ಯಕ್ಷ ಹರಿ ಪ್ರಕಾಶ್ ಬೈಲಾಡಿ, ಹಿರಿಯ ಉಪಾಧ್ಯಕ್ಷ ರವಿಚಂದ್ರ, ನಾಗೇಶ್, ಚಂದ್ರಶೇಖರ ನಾಯ್ಕ,ಪ್ರಮೋದ್ ಕುಮಾರ್, ಕವಿತಾ, ಸುಲೋಚನಾ, ಆಶಾ,ಹಾಗೂ ನೌಕರರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಮಚಂದ್ರ ಭಟ್ ಉಪಸ್ಥಿತರಿದ್ದರು.