ನೆಲ್ಯಾಡಿ: ಇಲ್ಲಿನ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಸೀದಿ ಖತೀಬರಾದ ಸೌಕತ್ ಆಲಿ ಅಲ್ ಅಮಾನಿ ಧಾರ್ಮಿಕ ನೇತೃತ್ವವನ್ನು ವಹಿಸಿದರು. ಆಡಳಿತ ಸಮಿತಿಯ ಅಧ್ಯಕ್ಷ ಎನ್.ಎಸ್.ಸುಲೈಮಾನ್, ಉಪಾಧ್ಯಕ್ಷ ಎಂ.ಹನೀಫ್ ಕರಾವಳಿ, ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಶಾಂತಿಬೆಟ್ಟು, ಕಾರ್ಯದರ್ಶಿಗಳಾದ ಅಬ್ದುಲ್ ಜಬ್ಬಾರ್, ಇಸ್ಮಾಯಿಲ್ ಎಸ್.ಎಮ್, ಕೋಶಾಧಿಕಾರಿ ಉಮ್ಮರ್ ತಾಜ್, ಲೆಕ್ಕಪರಿಶೋಧಕ ಹಾಗೂ ನ್ಯಾಯವಾದಿ ಎನ್.ಇಸ್ಮಾಯಿಲ್ ನೆಲ್ಯಾಡಿ, ಮಾಜಿ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಸಿಟಿ, ನಿಯಾಜ್ ಸಾಹೇಬ್, ಅಶ್ರಫ್ ಶಕ್ತಿ, ನೆಲ್ಯಾಡಿ ಗ್ರಾ.ಪಂ. ಸದಸ್ಯರಾದ ಮೊಹಮ್ಮದ್ ಇಕ್ಬಾಲ್, ಅಬ್ದುಲ್ ಜಬ್ಬಾರ್, ಪ್ರಮುಖರಾದ ನಾಝೀಂ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.
ಬೀಳ್ಕೊಡುಗೆ ಸಮಾರಂಭ:
ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿ ಈಗ ವರ್ಗಾವಣೆಗೊಂಡು ತೆರಳುತ್ತಿರುವ ಸೌಕತ್ ಆಲಿ ಅಲ್ ಅಮಾನಿ ಅವರಿಗೆ ಸಮಿತಿಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು. ಖತೀಬರ ಸೇವೆಯನ್ನು ಸ್ಮರಿಸಿ, ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.