*ದಶಮಾನೋತ್ಸವ ಸಂಭ್ರಮದಲ್ಲಿರುವ ಸಹಕಾರಿಯು ಪರಿಪೂರ್ಣತೆಯನ್ನು ಸಾಧಿಸಿದೆ: ಪೇಜಾವರ ಶ್ರೀ
*ಈ ಭಾಗದ ಜನರ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಸಹಕಾರಿಯು ಶ್ರಮಿಸಬೇಕು : ಆರ್.ಮಂಜುನಾಥ್
ಪುತ್ತೂರು: ಆರೋಗ್ಯವಂತ ಮನುಷ್ಯನ ದೇಹದಲ್ಲಿ ರಕ್ತ ಸಂಚಾರ ಇರುವಂತೆ ಸೌಂದರ್ಯ ಸಹಕಾರಿಯು ಕಾರ್ಯನಿರ್ವಹಿಸುತ್ತಿದ್ದು, ಸಂಸ್ಥೆಯು ನಿಂತ ನೀರಾಗದೆ ಕೊಡು ಕೊಳ್ಳುವ ಮೂಲಕ ನಿರಂತರ ಹಣದ ಸಂಚಾರ ಸಹಕಾರಿಯಲ್ಲಿ ಇರುವುದರಿಂದ 4ನೇ ಶಾಖೆ ತೆರೆಯಲು ಸಾಧ್ಯವಾಗಿದೆ. ಹತ್ತು ಎಂದರೆ ಪರಿಪೂರ್ಣ, ದಶಮಾನೋತ್ಸವ ಸಂಭ್ರದಲ್ಲಿರುವ ಸಹಕಾರಿಯು ಪರಿಪೂರ್ಣತೆಯನ್ನು ಸಾಧಿಸಿದೆ, ಅಲ್ಪ ಅವಧಿಯಲ್ಲೆ ಸ್ವಂತ ಕಟ್ಟಡವನ್ನು ಸಹ ನಿರ್ಮಿಸಿಕೊಂಡು ಇತರ ಸಹಕಾರಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಉಡುಪಿ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಗಳು ತಿಳಿಸಿದರು.
ಅವರು ಪುತ್ತೂರಿನ ಎಸ್.ಬಿ.ಬಿ. ಸೆಂಟರ್ ನಲ್ಲಿ ಶಾಖೆ ಹೊಂದಿರುವ ಬೆಂಗಳೂರಿನ ಹೆಸರಘಟ್ಟ ಸೌಂದರ್ಯ ಸೌಧದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ
ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ ಲಿಮಿಟೆಡ್ ನ 4ನೇ ಚಿಕ್ಕಬಾಣಾವರ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಾಜಿ ಶಾಸಕ ಆರ್.ಮಂಜುನಾಥ್ ರವರು ಮಾತನಾಡಿ, ಚಿಕ್ಕಬಾಣವರ ಭಾಗದ ಜನರ ಆರ್ಥಿಕ ಸ್ಥಿತಿಯನ್ನು ಮೇಲೆತ್ತಲು ಸಹಕಾರಿಯು ಶ್ರಮಿಸಬೇಕು, ನಿಷ್ಠರಾಗಿ ಸಾಲ ಮರುಪಾವತಿ ಮೂಲಕ ತಾವೂ ಬೆಳೆದು ಸಹಕಾರಿಯ ಬೆಳವಣಿಗೆಗೂ ಸಹಕರಿಸಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು.

ಉಪಾಧ್ಯಕ್ಷೆ ಎಂ.ಸುನಿತಾ, ವ್ಯವಸ್ಥಾಪಕ ನಿರ್ದೇಶಕ ಕೆ.ಕೃಷ್ಣಶೆಟ್ಟಿ, ನಿರ್ದೇಶಕರಾದ ಎಂ.ಕೀರ್ತನ್ ಕುಮಾರ್, ಎಂ.ವರುಣ್ ಕುಮಾರ್, ಸುರೇಶ್.ಸಿ.ಹೆಗಡಿ, ಪಿ.ಚಿನ್ನಮ್ಮ, ಪ್ರತೀಕ್ಷಾ, ಜೆ.ಆರ್.ನಿಷ್ಮಿತಾ, ಎಚ್.ಅರುಣಕುಮಾರ್, ಎಸ್.ಕೇಶವ್, ಎಚ್.ಎಂ.ರಾಜಶೇಖರಮೂರ್ತಿ, ರಜನಿ.ಪಿ.ಸೂರಿ, ಮಂಜುನಾಥ್ ಭಟ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಹೇಮಂತ ಬಿ.ವಿ., ಭರತ್, ನೆಲಮಂಗಲ ಶಾಖಾಧಿಕಾರಿ ಮಹಾಂತೇಶ್.ಎಂ.ನೆಗಳೂರ ಮೊದಲಾದವರು ಉಪಸ್ಥಿತರಿದ್ದರು.
ಸರ್ವರ ಸಹಕಾರ ಸಂಸ್ಥೆ ಬೆಳವಣಿಗೆಗೆ ಪೂರಕ
ಪಾಂಡವರಿಗೆ ಶ್ರೀಕೃಷ್ಣ ಚಾಲಕ ಶಕ್ತಿಯಾಗಿದ್ದಂತೆ ಅವರ ಪ್ರತಿನಿಧಿ ಪೇಜಾವರ ಶ್ರೀಗಳು ನಮಗೆ ಚಾಲಕ ಶಕ್ತಿಯಾಗಿ ನಿರಂತರ ಆಶೀರ್ವದಿಸುತ್ತ ಬಂದಿರುವುದರಿಂದ ಮತ್ತು ಸರ್ವ ಸದಸ್ಯರ ಸಹಕಾರದಿಂದ ನಮ್ಮ ಸಂಘವು ರೂ.250 ಕೋಟಿಗೂ ಅಧಿಕ ವ್ಯವಹಾರ ನಡೆಸಿದೆ.
ಸಂಘದ ಸರ್ವ ಸದಸ್ಯರ ನಿಷ್ಠೆ ನಂಬಿಕೆ ಉಳಿಸಿಕೊಂಡು ಇಂದು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮನಾಗಿ ಉತ್ತಮ ಸೇವೆ ಸಲ್ಲಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಸಂಘದ ಬೆಳವಣಿಗೆಯಲ್ಲಿ ಸಹಕರಿಸಿದ ಎಲ್ಲರಿಗೂ ಆಭಾರಿಯಾಗಿದ್ದೇವೆ, ಇನ್ನು ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತಿದ್ದೇವೆ.
-ಸೌಂದರ್ಯ ಪಿ. ಮಂಜಪ್ಪ,
ಅಧ್ಯಕ್ಷರು, ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್