ಬೆಟ್ಟಂಪಾಡಿ: ಇಲ್ಲಿನ ಡೆಮ್ಮಂಗರ ನಿವಾಸಿ, ಪ್ರಗತಿಪರ ಕೃಷಿಕರಾಗಿದ್ದ ವಿಶ್ವನಾಥ ರೈ ಡೆಮ್ಮಂಗಾರ (90ವ.) ರವರು ವಯೋಸಹಜವಾಗಿ ಏ. 1 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಲಲಿತಾ ರೈ, ಪುತ್ರಿ ವಿಮಲ ದೇವದಾಸ ರೈ, ಪುತ್ರರಾದ ಎಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶಾಂತರಾಮ ರೈ, ಕೃಷಿಕ ಕೃಷ್ಣಪ್ರಸಾದ್ ರೈ, ಅಳಿಯ ದೇವದಾಸ ರೈ, ಸೊಸೆಯಂದಿರಾದ ವೇದ ಶಾಂತರಾಮ ರೈ, ಪ್ರತಿಮಾ ಕೃಷ್ಣಪ್ರಸಾದ್ ರೈ, ಮೊಮ್ಮಕ್ಕಳನ್ನು ಅಗಲಿದ್ದಾರೆ.