ಅಧ್ಯಕ್ಷೆ:ಲೀನಾ ಮಚಾದೋ, ಕಾರ್ಯದರ್ಶಿ:ಜ್ಯುಲಿಯಾನಾ ವಾಸ್, ಕೋಶಾಧಿಕಾರಿ:ನಿಶಾ ಮಿನೇಜಸ್
ಪುತ್ತೂರು: ಬನ್ನೂರು ಸಂತ ಅಂತೋನಿ ಚರ್ಚ್ ನ ಕಥೋಲಿಕ್ ಸಭಾ ಘಟಕದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಲೀನಾ ಮಚಾದೊ, ಕಾರ್ಯದರ್ಶಿಯಾಗಿ ಜುಲಿಯಾನಾ ವಾಸ್,ಕೋಶಾಧಿಕಾರಿಯಾಗಿ ನಿಶಾ ಮಿನೇಜಸ್ ರವರು ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಜೊಸ್ಸಿ ಸಿಕ್ವೇರಾ, ಜೊತೆ ಕಾರ್ಯದರ್ಶಿಯಾಗಿ ಜಾಸ್ಮಿನ್ ಡಿ’ಸೋಜ, ಸ್ತ್ರೀಹಿತ ಸಂಚಾಲಕಿಯಾಗಿ ಗ್ರೇಸಿ ಗೊನ್ಸಾಲ್ವಿಸ್, ನಮ್ಮ ಸಂದೇಶ್ ಪ್ರತಿನಿಧಿಯಾಗಿ ಅನಿತಾ ಡಿ’ಸೋಜ, ರಾಜಕೀಯ ಸಂಚಾಲಕರಾಗಿ ಲೂಯಿಸ್ ಡಿ’ಸೋಜ, ಯುವಹಿತ ಸಂಚಾಲಕರಾಗಿ ಪ್ರಶಾಂತ್ ಕ್ರಾಸ್ತಾ, ಸಮುದಾಯ ಅಭಿವೃದ್ಧಿ ಸಂಚಾಲಕರಾಗಿ ಜಾನ್ ಪಾಯ್ಸ್, ನಿಕಟಪೂರ್ವ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್ ರವರು ಆಯ್ಕೆಯಾಗಿದ್ದಾರೆ.
ಇದರ ಚುನಾವಣಾಧಿಕಾರಿಯಾಗಿ ಕಥೋಲಿಕ್ ಸಭಾ ಕೇಂದ್ರೀಯ ಸದಸ್ಯರಾಗಿ ಕಥೋಲಿಕ್ ಸಭಾ ಪುತ್ತೂರು ಘಟಕದ ಅಧ್ಯಕ್ಷ ಪ್ರೊ|ಝೇವಿಯರ್ ಡಿಸೋಜಾ ಮತ್ತು ವೀಕ್ಷಕರಾಗಿ ಕಥೋಲಿಕ್ ಸಭಾ ವಲಯ ಅಧ್ಯಕ್ಷೆ ಲವೀನಾ ಪಿಂಟೊರವರು ಉಪಸ್ಥಿತರಿದ್ದು ಚುನಾವಣೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಬನ್ನೂರು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ತೋಮಸ್ ಫೆರ್ನಾಂಡಿಸ್, ಕಾರ್ಯದರ್ಶಿ ಜೋಯ್ಸ್ ಡಿ’ಸೋಜ ಮತ್ತು ಕಥೋಲಿಕ್ ಸಭೆಯ ಸದಸ್ಯರು ಉಪಸ್ಥಿತರಿದ್ದರು.