ಪುತ್ತೂರು: ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನಲ್ಲಿ ಪ್ರಥಮ ಪಿ.ಯು.ಸಿ ಯಲ್ಲಿ ಅನುತೀರ್ಣಗೊಂಡ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ/ವಾಣಿಜ್ಯ/ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ “ಉಚಿತಟ್ಯೂಷನ್” ತರಗತಿ ಆರಂಭಗೊಂಡಿದೆ.
ಅನುತೀರ್ಣಗೊಂಡ ವಿದ್ಯಾರ್ಥಿಗಳಿಗೆ ವಿಷಯವಾರು ಉಚಿತವಾಗಿ ಟ್ಯೂಷನ್ ತರಗತಿಗಳನ್ನು ನೀಡಲಾಗುವುದು. ತರಗತಿಗಳು ಎ.7ರಿಂದ ಪ್ರಾರಂಭಗೊಳ್ಳಲಿದೆ. ಆಸಕ್ತ ವಿದ್ಯಾರ್ಥಿಗಳ ಪೋಷಕರು ಇದರ ಪ್ರಯೋಜನವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಸಂಸ್ಥೆಯ ಪ್ರಾಂಶುಪಾಲರು ಹೇಮಲತಾ ಗೋಕುಲ್ನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ವಿದ್ಯಾರ್ಥಿಗಳು ಅಥವಾ ಪೋಷಕರು ಮುಖತಃ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು. ಕಛೇರಿಯ ಸಮಯ ಬೆಳಿಗ್ಗೆ 9.೦೦ ರಿಂದ ಸಂಜೆ 5.೦೦. ದೂರವಾಣಿ ಸಂಖ್ಯೆ 9900109490, 94801062741, 8123899490 ನಮ್ಮ ಸಂಸ್ಥೆಯು ಭಾನುವಾರವು ತೆರೆದಿರುತ್ತದೆ ಎಂದು ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ.