ಪುತ್ತೂರು: ಜವಾಹರ ನವೋದಯ ವಿದ್ಯಾಲಯಗಳಲ್ಲಿ 2025-26ನೇ ಸಾಲಿನ 6ನೇ ತರಗತಿಗೆ ಪ್ರವೇಶ ನೀಡುವ ಅರ್ಹತಾ ಪರೀಕ್ಷೆಯಲ್ಲಿ ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲಾ 5ನೇ ತರಗತಿಯ ವಿದ್ಯಾರ್ಥಿ ಹರ್ಷಿತ್ ಕೆ.ಎಲ್ ತೇರ್ಗಡೆಯಾಗಿದ್ದಾರೆ.
ಕುಂಬ್ರ ನಿವಾಸಿ ಎಕ್ಸ್ ಸರ್ವಿಸ್‌ಮೆನ್ ಸುಬೇದಾರ್ ಮೇಜರ್ ಲೋಕೇಶ್ ಕೆ.ಜಿ ಮತ್ತು ಜಯಲಕ್ಷ್ಮಿ ಕೆ.ಎಂ ದಂಪತಿ ಪುತ್ರರಾದ ಇವರಿಗೆ ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಹ್ಯಾರಿ ಡಿಸೋಜಾ ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಶುಭ ಹಾರೈಸಿದ್ದಾರೆ.