ಅನುತ್ತೀರ್ಣಗೊಂಡ ಎಲ್ಲಾ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್‌ – ಪ್ರಗತಿ ಸ್ಟಡೀ ಸೆಂಟರ್‌ ಘೋಷಣೆ

0

ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡೀ ಸೆಂಟರ್‌ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿಶೇಷ ಕೊಡುಗೆಯನ್ನು ಘೋಷಿಸಿದೆ.

ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ಪುತ್ತೂರು ತಾಲೂಕಿನ ಎಲ್ಲಾ ಸರಕಾರಿ ಪದವಿ ಪೂರ್ವ ಕಾಲೇಜಿನ ಕಲಿತ ಸೈನ್ಸ್, ಕಾಮರ್ಸ್‌, ಆರ್ಟ್ಸ್, ವಿಭಾಗದ ವಿದ್ಯಾರ್ಥಿಗಳಿಗೆ ʼಉಚಿತ ಟ್ಯೂಷನ್‌ʼ ನೀಡುವುದಾಗಿ ಪ್ರಗತಿ ಸ್ಟಡೀ ಸೆಂಟರ್‌ ಪ್ರಕಟಿಸಿದೆ. ಎ.7 ಸೋಮವಾರದಿಂದ ತರಗತಿಗಳು ಆರಂಭವಾಗಲಿದ್ದು, ಆಸಕ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಬೆಳಿಗ್ಗೆ 9ರಿಂದ ಸಂಜೆ 5ರ ಒಳಗಾಗಿ 9900109490/ 9480106274/ 8123899490 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಅಥವಾ ನೇರವಾಗಿ ಪ್ರಾಂಶುಪಾಲೆಯನ್ನು ಸಂಪರ್ಕಿಸಬಹುದಾಗಿದೆ. ಭಾನುವಾರವೂ ಸಂಸ್ಥೆ ತೆರೆದಿರುತ್ತದೆ.

LEAVE A REPLY

Please enter your comment!
Please enter your name here