ಪುತ್ತೂರು: ರೆಂಜಲಾಡಿ ಅಂಗನವಾಡಿ ಕೇಂದ್ರದ ಜಗಲಿಯಲ್ಲಿ ಇಟ್ಟಿದ್ದ ಬಕೆಟ್ ಹಾಗೂ ಕೊಡಪಾನ ಕಳ್ಳತನ ಆಗಿರುವ ಕುರಿತು ವರದಿಯಾಗಿದೆ.
ಎ.4ರಂದು ಬೆಳಿಗ್ಗೆ ಅಂಗನವಾಡಿಗೆ ಬಂದಾಗ ಅಂಗನವಾಡಿಯ ಬದಿಯಲ್ಲಿರಿಸಿದ್ದ ಬಕೆಟ್ ಮತ್ತು ಕೊಡಪಾನ ಇರಲಿಲ್ಲ, ಯಾರೋ ಕಳ್ಳರು ಕದ್ದೊಯ್ದಿರುವ ಸಾಧ್ಯತೆಯಿದ್ದು ಈ ಬಗ್ಗೆ ಪೊಲೀಸ್ ದೂರು ನೀಡಲಾಗುವುದು ಎಂದು ಅಂಗನವಾಡಿ ಶಿಕ್ಷಕಿ ಪುಷ್ಪಾವತಿ ಹಾಗೂ ಬಾಲವಿಕಾಸ ಸಮಿತಿ ಅಧ್ಯಕ್ಷೆ ಚೈತ್ರಾ ನೆಕ್ಕಿಲು ತಿಳಿಸಿದ್ದಾರೆ.