ಪುತ್ತೂರು : ಮೂರೂವರೆ ವರುಷ ಮೇಲ್ಪಟ್ಟ ಪುಟಾಣಿ ಮಕ್ಕಳ ಸಹಿತ ಹದಿನೈದು ವರುಷವರೆಗಿನ ಮಕ್ಳಳಿಗೂ ಬೇಸಿಗೆ ಅವಧಿಯ 15 ದಿನಗಳ ವಿಶೇಷ ಶಿಬಿರ ಇಲ್ಲಿನ ಕಲ್ಲಾರೆ ಜೆಕೆ ಸಂಕೀರ್ಣದ ಮಳಿಗೆಯಲ್ಲಿ ಕಾರ್ಯಚರಿಸುತ್ತಿರುವ ” ದಿ ಡೊಮೀನೇಟರ್ಸ್ ಡ್ಯಾನ್ಸ್ ಸ್ಟುಡಿಯೋ ಹಾಗೂ ರಾಜ್ ಡ್ಯಾನ್ಸ್ ಕ್ರಿಯೇಷನ್ಸ್ ಪುತ್ತೂರು ಇದರ ವತಿಯಿಂದ ,ನುರಿತ ತರಬೇತುದಾರರ ಮೂಲಕ ಪ್ರಾರಂಭಗೊಂಡಿದ್ದು , ಶಿಬಿರದ ಉದ್ಘಾಟನೆಯನ್ನು ಫ್ಯಾಶನ್ ಶೋ ಟ್ರೈನರ್ ಶ್ರಾವ್ಯ ಶೆಟ್ಟಿ ನೆಲ್ಲಿಕಟ್ಟೆ ನೆರವೇರಿಸಿ ,ಹಾರೈಸಿದರು.
ಈ ವೇಳೆ ಪುಟಾಣಿಗಳ ಸಹಿತ ಕಿರಿಯ ,ಹಿರಿಯ ಮಕ್ಕಳು , ಹೆತ್ತವರು ಹಾಗೂ ಡ್ಯಾನ್ಸ್ ಕೊರಿಯೋಗ್ರಾಫರ್ ನಿತಿನ್ ಪೂಜಾರಿ ಮತ್ತು ಶ್ರೀನಿ ಆಚಾರ್ಯ ಹಾಜರಿದ್ದರು.
ಬೇಸಿಗೆ ಶಿಬಿರದಲ್ಲಿ ನುರಿತ ತಂಡದಿಂದ ಮಕ್ಕಳಿಗೆ ಡ್ಯಾನ್ಸ್ ,ಡ್ರಾಮಾ ,ಗೇಮ್ಸ್ ,ಫ್ಯಾಶನ್ ,ಮ್ಯೂಸಿಕ್ ,ಸಿಂಗಿಂಗ್ ಮತ್ತು ಆರ್ಟ್ ಆ್ಯಂಡ್ ಕ್ರಾಫ್ಟ್ ಈ ಮೊದಲಾದ ಕಲೆಯನ್ನು ಕಲಿಸಿಕೊಡಲಾಗುತ್ತಿದ್ದು , ತರಗತಿ ಸೇರ ಬಯಸುವ ಮಕ್ಕಳಿಗೆ ಇನ್ನೂ ಅವಕಾಶ ಕಲ್ಪಿಸಲಾಗಿದೆ. ಪ್ರತಿ ವಾರವು ತರಗತಿಗಳು ಲಭ್ಯವಿದ್ದು , ನೃತ್ಯ ಪ್ರಿಯರು ಇದರ ಪ್ರಯೋಜನ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7760915951 ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ.
ಮಹಿಳೆಯರಿಗೆ,ಪುರುಷರಿಗೆ ಡ್ಯಾನ್ಸ್ ಮೂಲಕ ಫಿಟ್ನೆಸ್ …!
ಹುಡುಗರು ಮತ್ತು ಹುಡುಗಿಯರು ಫಿಟ್ ಆ್ಯಂಡ್ ಹ್ಯಾಂಡ್ಸಮ್ ಆಗಿರಲು ಪ್ರತ್ಯೇಕ ಬ್ಯಾಚ್ ಮೂಲಕ ಡ್ಯಾನ್ಸ್ ಫಿಟ್ನೆಸ್ ತರಬೇತಿಯನ್ನು ಕೂಡ ನೀಡಲಾಗುತ್ತಿದ್ದು ,ಆಸಕ್ತರು ಈ ತರಬೇತಿ ಪ್ರಯೋಜನ ಪಡೆದುಕೊಳ್ಳಬಹುದು.