ಪುತ್ತೂರು: ಶಾಂತಿಗೋಡು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆದ ಬಳಿಕ ದೈವಗಳಾದ ಶ್ರೀ ರಕ್ತೇಶ್ವರಿ, ವ್ಯಾಘ್ರ ಚಾಮುಂಡಿ, ಸತ್ಯದೇವತೆ ಕಲ್ಲುರ್ಟಿ ದೈವಗಳ ನೇಮೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ತೋಳ್ಪಾಡಿತ್ತಾಯ ಶಾಂತಿಗೋಡು, ಸಮಿತಿ ಸದಸ್ಯರಾಗಿರುವ ಅರ್ಚಕ ರಾಮಕೃಷ್ಣ ಬಳ್ಳಕ್ಕುರಾಯ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಬಾಬು ಗೌಡ ಬರೆ ಕೈಂದಾಡಿ, ಕಾರ್ಯದರ್ಶಿ ಕೃಷ್ಣ ಎಸ್ ವಿಷ್ಣುನಗರ, ಕೋಶಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ದೈವಗಳ ನೇಮ ಉಸ್ತುವಾರಿಗಳಾದ ಜಯಾನಂದ ಬೊಳ್ಳಮೆ, ವಿಶ್ವನಾಥ ಗೌಡ ಬೊಳ್ಳಮೆ, ದಯಾನಂದ ತೋಟ, ಯಶೋಧರ ಕುಕ್ಯಾನ, ಸಂದೀಪ್ ಕುಕ್ಯಾನ, ಸಂತೊಷ್ ಕುಕ್ಯಾನ, ಗಣೇಶ್ ಪೂಜಾರಿ ಕೈಂದಾಡಿ, ಯಶೋಧರ ಕುಕ್ಯಾನ, ಹರೀಶ ಕೈಂದಾಡಿ, ನಾರ್ಣಪ್ಪ ಸಾಲ್ಯಾನ್ ಮರಕ್ಕೂರು, ರಶ್ಮಿತ್ ಮರಕ್ಕೂರು, ಹೊನ್ನಪ್ಪ ಗೌಡ ಕೈಂದಾಡಿ, ಕೂಸಪ್ಪ ಗೌಡ ಕಲ್ಕಾರು, ಹರೀಶ್ ಕಂರ್ಬಡ್ಕ, ನಾರಾಯಣ ಪೂಜಾರಿ ಬೇರಿಕೆ, ನಾರಾಯಣ ಗೌಡ ಕೈಂದಾಡಿ, ಆನಂದ ಗೌಡ ಬೊಳ್ಳಮೆ, ವಿವಿಧ ಸಮಿತಿ ಸದಸ್ಯರು ಹಾಗೂ ಊರ ಪರವೂರ ಸಾವಿರಾರು ದೈವದ ಭಕ್ತರು, ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
