ಬೊಬ್ಬೆಕೇರಿ ಶಾಲಾ ವಿದ್ಯಾರ್ಥಿಗಳಿಂದ ಪರಿಸರ ಅಧ್ಯಯನ, ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆ- ಜೇನುಕೃಷಿ ಮಾಹಿತಿ

0

ಕಾಣಿಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಬ್ಬೆಕೇರಿ ಇಲ್ಲಿಯ ವಿದ್ಯಾರ್ಥಿಗಳಿಗೆ ಇಕೋ ಕ್ಲಬ್ ವತಿಯಿಂದ ಹೊರ ಸಂಚಾರ ಹಾಗೂ ವನಭೇಟಿ ನೀಡಿ ಪರಿಸರ ಅಧ್ಯಯನ ನಡೆಸಿದರು.


ಶಿಕ್ಷಕರಾದ ಜನಾರ್ಧನ ಹೇಮಳ ಇವರ ನೇತೃತ್ವದಲ್ಲಿ ಹೇಮಳದ ಕಾಡಿಗೆ ಹಾಗೂ ಇನ್ನಿತರ ಸುತ್ತಮುತ್ತಲಿನ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಾದ ಎಣ್ಮೂರು ಗರೋಡಿ, ಕಿನ್ನಿದಾರು ಮನೆ, ನಾಕೂರು ಗಯಾ ಹಾಗೂ ಕೆಮ್ಮಲೆ ನಾಗಬ್ರಹ್ಮ ದೇವಸ್ಥಾನಗಳಿಗೆ ಭೇಟಿ ನೀಡಲಾಯಿತು. ಮರ ಗಿಡ ಉಳಿಸಿ, ಪರಿಸರ ರಕ್ಷಿಸಿ ಎಂಬ ಘೋಷಣೆ ಯೊಂದಿಗೆ ಪರಿಸರ ಅಧ್ಯಯನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಅರಣ್ಯದಲ್ಲಿ ಬೆಳೆದಿದ್ದ ನಾನಾ ಜಾತಿಯ ಸಸ್ಯಗಳ ಕುರಿತು ಶಿಕ್ಷಕರು ವಿವರಿಸಿದರು.


ಜೇನುಕೃಷಿ ಮಾಹಿತಿ:
ಪರಿಸರ ಅಧ್ಯಯನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಪವನ್ ಹೇಮಳ ಇವರ ಮನೆಗೆ ಭೇಟಿ ನೀಡಿ ಅವರು ನಡೆಸುತ್ತಿರುವ ಜೇನು ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಇದರೊಂದಿಗೆ ಮಕ್ಕಳಿಗಾಗಿ ವನಭೋಜನವನ್ನು ಆಯೋಜಿಸಲಾಗಿತ್ತು. ಇಕೋ ಕ್ಲಬ್ ಸದಸ್ಯರಾದ ಆರು ಮತ್ತು ಏಳನೇ ತರಗತಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರಾದ ಗೀತಾಕುಮಾರಿ, ದಿವ್ಯಾ, ಸುಶ್ಮಿತಾ ಹಾಗೂ ಜಯಲತಾ ಇವರು ಜೊತೆಗಿದ್ದರು.

ಮರ ಗಿಡ ಉಳಿಸಿ, ಪರಿಸರ ರಕ್ಷಿಸಿ ಎಂಬ ಘೋಷಣೆ ಯೊಂದಿಗೆ ಪರಿಸರ ಅಧ್ಯಯನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಅರಣ್ಯದಲ್ಲಿ ಬೆಳೆದಿದ್ದ ವಿವಿಧ ಬಗೆಯ ಸಸ್ಯಗಳ ಕುರಿತು ಶಿಕ್ಷಕರು ವಿವರಿಸಿದರು.

LEAVE A REPLY

Please enter your comment!
Please enter your name here