ಕಾಣಿಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಣಿಯೂರು ಇಲ್ಲಿ ಬ್ಯಾಂಕಿಂಗ್ ವ್ಯವಹಾರದ ಕುರಿತು ಮಾಹಿತಿ ಕಾರ್ಯಕ್ರಮ ವನ್ನು ನಡೆಸಲಾಯಿತು.

ಕಾಣಿಯೂರು ಬ್ಯಾಂಕ್ ಆಫ್ ಬರೋಡ ಇದರ ಮ್ಯಾನೇಜರ್ ಅತಿಥ್ ರೈ ಯವರು, ಬ್ಯಾಂಕ್ ಖಾತೆ, ಎ ಟಿ ಎಂ, ಬ್ಯಾಂಕ್ ವ್ಯವಹಾರಗಳ ಬಗ್ಗೆ, ಜಂಟಿ ಖಾತೆ ತೆರೆಯುವುದು ಹೇಗೆ, ಆರ್ ಡಿ ಯಲ್ಲಿ ಖಾತೆ ತೆರೆಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಶಿಕ್ಷಕಿ ಸುಜಯ ಸ್ವಾಗತಿಸಿ, ಶಾಲಾ ಮುಖ್ಯ ಗುರು ಬಾಲಕೃಷ್ಣರವರು ವಂದಿಸಿದರು. ಶಿಕ್ಷಕರಾದ ದೇವಕಿ, ಭಾರತಿ, ರಶ್ಮಿ ಆರ್, ಸವಿತ, ಚೈತನ್ಯ ಮತ್ತು ನಯನ ಪ್ರಭು ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು.