ಎ.9: ರಾಜ್ಯ ಸರಕಾರದ ವಿರುದ್ಧ ಮಂಗಳೂರಿನಲ್ಲಿ ಜನಾಕ್ರೋಶ ಪಾದಯಾತ್ರೆ- ಪುತ್ತೂರಿನಿಂದ ಮೂರು ಸಾವಿರಾರು ಮಂದಿ ಕಾರ್ಯಕರ್ತರು ಭಾಗಿ : ಸಂಜೀವ ಮಠಂದೂರು

0

ಪುತ್ತೂರು: ರಾಜ್ಯ ಸರಕಾರ ಬಜೆಟ್ ನಲ್ಲಿ ಒಂದು ವರ್ಗಕ್ಕೆ ಶೇ.4 ಗುತ್ತಿಗೆಯನ್ನು ನೀಡುವ ಮೂಲಕ ಒಂದು ವರ್ಗದ ಓಲೈಕೆ ಮಾಡುತ್ತಿದ್ದು, ಹಿಂದೂ ವಿರೋಧಿ ನೀತಿ, ದ್ವೇಷದ ರಾಜಕಾರಣ ಮಾಡುತ್ತಿದೆ. ಗ್ಯಾರಂಟಿ ನೆಪದಲ್ಲಿ ರಾಜ್ಯ ಸರಕಾರ ಅಭಿವೃದ್ಧಿ ಮರೆತಿದೆ. ಇನ್ನೊಂದೆಡೆ ನೆಲ-ಜಲ ಎಲ್ಲವನ್ನೂ ಬಿಡದೆ ದರ ಏರಿಕೆ ಮೂಲಕ ಜನಸಾಮಾನ್ಯರನ್ನು ಲೂಟುತ್ತಿದೆ. ರಾಜ್ಯ ಸರಕಾರದ ತುಘಲಕ್ ಆಡಳಿತ, ಜನವಿರೋಧಿ ನೀತಿಯನ್ನು ಖಂಡಿಸಿ ಎ.9ರಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಲ್ಲಿ ಜನಾಕ್ರೋಶ ಪಾದಯಾತ್ರೆ ನಡೆಯಲಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸುಮಾರು ಮೂರು ಸಾವಿರ ಮಂದಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ಈಗಾಗಲೇ ಹಾಲಿನ ದರವನ್ನು ಎರಡು ವರ್ಷದಲ್ಲಿ ಮೂರು ಬಾರಿ ಹೆಚ್ಚಿಸಿ ಕಳೆದ ಆರು ತಿಂಗಳಿಂದ ಸುಮಾರು 600 ಕೋಟಿ ರೂಪಾಯಿ ಸಹಾಯಧನ ನೀಡದೆ ರೈತರನ್ನು ವಂಚಿತರನ್ನಾಗಿ ಮಾಡಿದೆ. ವಿದ್ಯುತ್ ದರ ಯುನಿಟ್ ಗೆ 36 ಪೈಸೆ ಹೆಚ್ಚಳ, ಬಸ್ ದರ 15 ರಿಂದ 20 ಶೇ., ಮೆಟ್ರೋ ದರ 100 ಶೇ. ಹೆಚ್ಚಳ ಡಿಸೇಲ್ ಬೆಲೆ 2 ಹೆಚ್ಚಳ, ಸ್ಮಾರ್ಟ್ ಮೀಟರ್ 750 ರಿಂದ 2500 ರೂ. ಹೆಚ್ಚಳ ಹೀಗೆ ಜಲ-ನೆಲ ಎಲ್ಲವನ್ನೂ ಬಿಡದೆ ದರ ಹೆಚ್ಚಿಸುವ ಮೂಲಕ ಒಂದೆಡೆಯಿಂದ ಸರಕಾರ ಜನರಿಗೆ ಚಿನ್ನದ ಚಾಕು ಕೊಟ್ಟು, ಇನ್ನೊಂದೆಡೆ ಕಬ್ಬಿಣದ ಚೂರಿಯಿಂದ ಇರಿಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಜನಾಕ್ರೋಶ ಪಾದಯಾತ್ರೆಗೆ ಪುತ್ತೂರಿನಿಂದ ಸುಮಾರು 3 ಸಾವಿರಕ್ಕೂ ಮೇಲ್ಪಟ್ಟು ಕಾರ್ಯರ್ಕರು ಪಾಲ್ಗೊಳ್ಳಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪುರುಷೋತ್ತಮ ಮುಂಗ್ಲಿಮನೆ, ವಿರೂಪಾಕ್ಷ ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here