ಪುತ್ತೂರು: ಶ್ರೀ ಅಮ್ಮನವರ ದೇವಸ್ಥಾನ ಆರ್ಯಾಪು ನೇರಳಕಟ್ಟೆ ಶ್ರೀ ಕ್ಷೇತ್ರದ ವಾರ್ಷಿಕ ಮಾರಿಪೂಜೆಯು ಕ್ಷೇತ್ರದ ತಂತ್ರಿವರ್ಯರಾದ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿವರ್ಯರ ನೇತೃತ್ವದಲ್ಲಿ ಕ್ಷೇತ್ರದ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಸತೀಶ್ ರೈ ಮಿಷನ್ಮೂಲೆ ಇವರ ಗೌರವಾಧ್ಯಕ್ಷತೆಯಲ್ಲಿ ಎ.26 ಮತ್ತು 27 ರಂದು ನಡೆಯಲಿದೆ. ಮಾರಿಪೂಜೆಗೆ ಗೊನೆ ಮುಹೂರ್ತವು ಎ.20 ರಂದು ನಡೆಯಲಿದೆ. ಈ ಪ್ರಯುಕ್ತ ಆಮಂತ್ರಣ ಪತ್ರಿಕೆಯನ್ನು ಎ.6 ರಂದು ಶ್ರೀ ಕ್ಷೇತ್ರದಲ್ಲಿ ಪುತ್ತೂರು ನಗರಸಭೆಯ ಸದಸ್ಯರಾದ ರಮೇಶ್ ರೈ ಮೊಟ್ಟೆತ್ತಡ್ಕ ಇವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ರವಿಚಂದ್ರ ಆಚಾರ್ಯ ಅನುವಂಶಿಕ ಆಡಳಿತ ಮೊಕ್ತೇಸರರಾದ ಗೋಪಾಲ್ ಬೆಟ್ಟಂಪಾಡಿ, ಆಡಳಿತ ಸಮಿತಿಯ ಸದಸ್ಯರಾದ ಆನಂದ ಅಮೀನ್ ಹೊಸಮನೆ, ನೇಮಾಕ್ಷ ಸುವರ್ಣ ಅಮ್ಮುಂಜ, ಶೇಷಪ್ಪ ಗೌಡ(ನಿವೃತ್ತ ಪೋಲಿಸ್ ಅಧಿಕಾರಿ), ರವೀಂದ್ರ ಶೆಟ್ಟಿ ಕಂಬಳತ್ತಡ್ಡ, ತಾರಾನಾಥ ಬಂಗೇರ ಮೇರ್ಲ, ಸುರೇಶ್ ಪಿ, ಶ್ರೀ ಅಮ್ಮನವರ ಸೇವಾ ಸಮಿತಿಯ ಅಧ್ಯಕ್ಷರಾದ ಜಗನ್ನಾಥ ಪಿ, ಸದಸ್ಯರಾದ ಹರೀಶ ಪಿ, ಯೋಗೀಶ ಪಿ, ರಾಮ ಆರ್ಯಾಪು, ಸಂತೋಷ್ ನಂದಾವರ, ವಸಂತ ಪಿ, ಬಾಲಕ್ರಷ್ಣ ನೆಹರುನಗರ, ಮಾ. ಸನ್ವಿತ್ ಕುಮಾರ್, ಮಾ.ಮನ್ವಿತ್ ಕುಮಾರ್, ಧನ್ವಿಶ್ ಆರ್ಯಾಪು, ಪ್ರಧಾನ ಅರ್ಚಕರಾದ ಸುನಿಲ್ ಮಚ್ಚೇಂದ್ರ ಹಾಗೂ ಹಲವರು ಹಾಜರಿದ್ದರು