ಅರಿಯಡ್ಕ: ಡಾ. ಎಂ.ವಿ. ಶೆಟ್ಟಿ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸೈನ್ಸಸ್ ಆಂಡ್ ಮ್ಯಾನೇಜ್‌ಮೆಂಟ್ ನೇತೃತ್ವದಲ್ಲಿ ಡಾ. ಎಂ.ವಿ ಶೆಟ್ಟಿ ಕಾಲೇಜ್ ಆಫ್ ನರ್ಸಿಂಗ್, ಡಾ.ಎಂ.ವಿ.ಶೆಟ್ಟಿ ಕಾಲೇಜ್ ಆಫ್ ಸ್ಪೀಚ್ ಆಂಡ್ ಹಿಯರಿಂಗ್ ಹಾಗೂ ಡಾ.ಎಂ.ವಿ. ಶೆಟ್ಟಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಯ ಸಹಯೋಗದೊಂದಿಗೆ ವೈದ್ಯಕೀಯ ತಪಾಸಣಾ ಶಿಬಿರವನ್ನು ಎ.9ರಂದು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ, ಪಾಪೆಮಜಲಿನಲ್ಲಿ ನಡೆಸಲಾಯಿತು.
ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿ ವೈದ್ಯಕೀಯ ತಪಾಸಣೆಯ ಸೌಲಭ್ಯಗಳನ್ನು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ರಾಜೀವ್ ರೈ ಕುತ್ಯಾಡಿ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೆಜಿಯನ್ ಅಧ್ಯಕ್ಷೆ ಮಲ್ಲಿಕಾ ರೈ ಹಾಗೂ ನಿರ್ದೇಶಕಿಯಾಗಿ ಅನ್ನಪೂರ್ಣಿಮಾ ರೈ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಪೆಮಜಲು ಇದರ ಮುಖ್ಯೋಪಾಧ್ಯಾಯಿನಿ ಶಶಿಕಲಾ ಎಂ, ಹಾಗೂ ಶಿಕ್ಷಕ ವೃಂದ,ಡಾ.ಎಂ.ವಿ ಶೆಟ್ಟಿ ಇನ್ ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಸೈನ್ಸಸ್ ಆಫ್ ಮ್ಯಾನೇಜ್ಮೆಂಟ್ ಮಂಗಳೂರು ಇದರ ಸಹ ಪ್ರಾಧ್ಯಾಪಕಿಯರಾದ ಸ್ವಷ್ನ ಶೆಟ್ಟಿ ಮತ್ತು ಭವ್ಯ ಬಂಗೇರ ಉಪಸ್ಥಿತರಿದ್ದರು.
