ಪುತ್ತೂರು: ಇಲ್ಲಿನ ಹೆಚ್ ಪಿಆರ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನ 6ನೇ ಸಾಲಿನ ವಿದ್ಯಾರ್ಥಿಗಳ ಉಧ್ಘಾಟನೆ ಹಾಗೂ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಎಪ್ರಿಲ್ 05 ರಂದು ಬಂಟರ ಭವನ ಪುತ್ತೂರು ಸಭಾಭವನದಲ್ಲಿ ನಡೆಯಿತು.
ನೆಲ್ಲಿಕಟ್ಟೆ ಬರೆಕೆರೆ ಸಂಕೀರ್ಣದಲ್ಲಿ ಕಾರ್ಯನಿವಹಿಸುತ್ತಿರುವ ಹೆಚ್‌ಪಿಆರ್ ಇನ್ಸಿಟ್ಯೂಟ್ ಆಫ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಸೈನ್ಸಸ್ ಸಂಸ್ಥೆಯ ಜಿಎನ್ ಎಂ ಮತ್ತು ಪ್ಯಾರಾಮೆಡಿಕಲ್ ವಿದ್ಯಾಥಿಗಳ ದೀಪ ಪ್ರಜ್ವಲನೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿದ ಗೌರವಾನ್ವಿತ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶಿವಣ್ಣ ಹೆಚ್ ಆರ್ ರವರು, ಸಾಮಾಜಿಕ ಪಿಡುಗು ಮತ್ತು ವೈದ್ಯಕೀಯ ತುರ್ತು ಸೇವೆಗಳ ಸಂದರ್ಭದಲ್ಲಿ ನರ್ಸಿಂಗ್ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಪಾತ್ರ ಮತ್ತು ಮಹತ್ವದ ಕುರಿತು ವಿವರಣೆ ನೀಡಿದರು.
ಗೌರವ ಅತಿಥಿಯಾಗಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ದೀಪಕ್ ರೈ ರವರು, ವೈದ್ಯಕೀಯ ಕ್ಷೇತ್ರದಲ್ಲಿ ವ್ಯೆದ್ಯರ ಪಾತ್ರದೊಂದಿಗೆ ವ್ಯೆದ್ಯಕೇತರ ಸಿಬ್ಬಂದಿಗಳ ಪಾತ್ರವು ಮಹತ್ವವಾದುದು ಎಂದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭಹಾರೈಸಿದರು.
ಭಾರತೀಯ ದಂತ ಸಂಸ್ಥೆ ಪುತ್ತೂರು ಶಾಖೆಯ ಮಾಜಿ ಅಧಕ್ಷರಾದ ರಾಜಾರಾಮ್ ಕೆ.ಬಿ ರವರು, ಮನುಕುಲದ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ ವ್ಯೆದ್ಯಕೀಯ ಸೇವೆಯು ವ್ಯವಹಾರವಲ್ಲ, ಇದು ಭಾವನೆಗಳೊಂದಿಗಿನ ಒಡನಾಟ ಎಂಬ ಮಾತುಗಳೊಂದಿಗೆ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಸಂಸ್ಥೆಯ ಮಾಲಕರಾದ ಹರಿಪ್ರಸಾದ್ ರೈ ಇವರು ಈ ಸಂಸ್ಥೆಯು ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ ಈಗ ಸುಮಾರು ಐನೂರು ವಿದ್ಯಾರ್ಥಿಗಳನ್ನು ಒಳಗೊಂಡಿರುವ ಸಂಸ್ಥೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಅತ್ಯುತ್ತಮ ಭವಿಷ್ಯ ಸಿಗಲೆಂದು ಹಾರೈಸಿದರು.
ಆಧುನಿಕ ನರ್ಸಿಂಗ್ ನಿರ್ಮಾತೃ ಲೇಡಿ ನೈಟಿಂಗೇಲ್ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಲಾಯಿತು. ಪುತ್ತೂರಿನ ಸರಕಾರಿ ಆಸ್ಪತ್ರೆ ನರ್ಸಿಂಗ್ ಮೇಲ್ವಿಚಾರಕಿ ಪುಷ್ಪಾವತಿ ವಿದ್ಯಾರ್ಥಿ ಗಳಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು. ಸಂಸ್ಥೆಯ ಟ್ರಸ್ಟಿ ವಿಜೇತ ರೈ, ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಪ್ರಾಂಶುಪಾಲೆ ಪ್ರೀತಾ ಹೆಗ್ಡೆ, ಸರಕಾರಿ ಆಸ್ಪತ್ರೆ ನರ್ಸಿಂಗ್ ಅಧಿಕಾರಿ ಎಲ್ಸಮ್ಮ, ಸಂಸ್ಥೆಯ ಪ್ರಾಂಶುಪಾಲೆ ಇವ್ನೀಸ್ ಆಗ್ನೆಸ್ ಡಿಸೋಜಾ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು.
ಉಪನ್ಯಾಸಕರ ತಂಡದ ಶಾರುನ್ ಫೆರ್ನಾಂಡಿಸ್ ಸ್ವಾಗತಿಸಿದರು, ಪ್ರತೀಕ್ಷಾ ಮತ್ತು ತಂಡ ಪ್ರಾರ್ಥನೆ ನೆರವೇರಿಸಿದರು, ಪ್ರಮೀಳಾ ನಾಗೇಶ್ ಹಾಗೂ ಮಿಶ್ರಾನ ನಿರೂಪಿಸಿದರು ಹಾಗೂ ದಿಶಾಂತ್ ರವರು ವಂದಿಸಿದರು. ಆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.