ಪುತ್ತೂರು: ಆಕಸ್ಮಿಕವಾಗಿ ಬಾವಿಗೆ ಬಿದ್ದ ವ್ಯಕ್ತಿ – ಅಗ್ನಿಶಾಮಕದಳದಿಂದ ರಕ್ಷಣೆ

0

ಪುತ್ತೂರು:ಪುತ್ತೂರು ಆನಂದಾಶ್ರಮದ ಹತ್ತಿರ ಸಿಂಹವನ ಎಂಬಲ್ಲಿ ವ್ಯಕ್ತಿಯೋರ್ವರು ಸುಮಾರು 60 ಅಡಿ ಆಳ ಇರುವ ಸಾರ್ವಜನಿಕ ಬಾವಿಗೆ ಆಕಸ್ಮಿಕವಾಗಿ ಬಿದ್ದ ಘಟನೆ ಎ.10ರಂದು ನಡೆದಿದೆ.

ಪೋಡಿಯಾ ಎಂಬವರ ಮಗ ಆನಂದ (36 ಪ್ರಾಯ)ರವರು ಬಾವಿಗೆ ಬಿದ್ದ ವ್ಯಕ್ತಿ ಎಂದು ತಿಳಿದುಬಂದಿದೆ.

ಜೀವ ರಕ್ಷಣೆಗಾಗಿ ಬೊಬ್ಬಿಡುತ್ತಿದ್ದ ಆನಂದ ಅವರನ್ನು ಗಮನಿಸಿದ ಸ್ಥಳೀಯರು ತಕ್ಷಣ ಪುತ್ತೂರು ಅಗ್ನಿಶಾಮಕದಳಕ್ಕೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಎಚ್ಚೆತ್ತ ಅಗ್ನಿಶಾಮಕದಳದ ಅಧಿಕಾರಿ/ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ಧಾವಿಸಿ ಬಾವಿಗೆ ಬಿದ್ದಿರುವ ವ್ಯಕ್ತಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಣೆ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅಧಿಕಾರಿ ಶಂಕರ, ಅಗ್ನಿಶಾಮಕದಳದ ರುಕ್ಮಯ್ಯ ಗೌಡ, ಅಗ್ನಿಶಾಮಕದಳದ ಮಂಜುನಾಥ,ತೌಸಿಫ್‌ ಮುಲ್ಲ,ಕುಶಾಲಪ್ಪ ಕೆ, ಶಿವಾನಂದ ಅನಾವಲ,ಮತ್ತು ಚಾಲಕ ಮೋಹನ್ ಜಾದವ್ ಬಾವಿಗೆ ಇಳಿದು ವ್ಯಕ್ತಿಯನ್ನು ಮೇಲಕ್ಕೆ ಎತ್ತುವಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here