ಮರಳಿ ಮರಳಿ ಬರುತ್ತಿದೆ ‘ಜಿ.ಎಲ್ ವರುಷದ ಹಬ್ಬ’- ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಚಿನ್ನಾಭರಣಗಳ ಶಾಪಿಂಗ್‌ನ ‘ವರುಷದ ಹರುಷ’

0

ಪುತ್ತೂರು: ವರುಷಕ್ಕೊಮ್ಮೆ ಬರುವ ಹಬ್ಬಗಳು ನಮ್ಮ ಮನಸ್ಸನ್ನು ಮುದಗೊಳಿಸುತ್ತವೆ, ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಹಾಗೆಯೇ, ವ್ಯಾವಹಾರಿಕ ಜಗತ್ತಿನಲ್ಲೂ ವರ್ಷಕ್ಕೊಮ್ಮೆ ನಡೆಸುವ ವಿಶೇಷ ವಾರ್ಷಿಕ ಮಾರಾಟ ಉತ್ಸವಗಳಿಂದ ಸಂಸ್ಥೆ ಮತ್ತು ಗ್ರಾಹಕರ ‘ಚಿನ್ನ’ದಂತ ಬಾಂಧವ್ಯ ಇನ್ನಷ್ಟು ಹೊಳಪಾಗಿ ಗಟ್ಟಿಗೊಳ್ಳಲು ಕಾರಣವಾಗುತ್ತದೆ ಎಂಬ ಆಶಯದೊಂದಿಗೆ, ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಪುತ್ತೂರು, ಮೂಡಬಿದ್ರೆ, ಸುಳ್ಯ, ಹಾಸನ ಮತ್ತು ಕುಶಾಲನಗರದಲ್ಲಿರುವ ತನ್ನ ಶಾಖೆಗಳಲ್ಲಿ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ನೆಚ್ಚಿನ ಗ್ರಾಹಕರಿಗೆ ‘ಜಿ.ಎಲ್.ಶಾಪಿಂಗ್ ಹಬ್ಬ-ವರುಷದ ಹರುಷ’ ಎಂಬ ವಿಶಿಷ್ಟ ಶಾಪಿಂಗ್ ಹಬ್ಬವನ್ನು ಎ.13ರಿಂದ ಆಯೋಜಿಸಿದೆ.


ಜಿಲ್ಲೆಯ ಅತೀ ದೊಡ್ಡ ಚಿನ್ನಾಭರಣಗಳ ಮಳಿಗೆ ಎಂದೇ ಖ್ಯಾತಿ ಪಡೆದಿರುವ ಜಿ.ಎಲ್ ಆಚಾರ್ಯ ಜ್ಯುವೆಲ್ಲರ‍್ಸ್‌ನಲ್ಲಿ 25,2೦೦ಕ್ಕೂ ಅಧಿಕ ಶೈಲಿಯ ಚಿನ್ನ ಹಾಗೂ ವಜ್ರಾಭರಣಗಳ ಸಂಗ್ರಹವಿದ್ದು ಗ್ರಾಹಕರ ಮನ ಮೆಚ್ಚುವ ಆಭರಣಗಳ ಆಯ್ಕೆಗೆ ವಿಪುಲ ಅವಕಾಶವಿದೆ. ವರುಷದ ಹಬ್ಬದಲ್ಲಿ ಚಿನ್ನಾಭರಣಗಳ ಖರೀದಿಗೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ಹಾಗೂ ಕೊಡುಗೆಗಳೊಂದಿಗೆ ಮಳಿಗೆ ವಾರ್ಷಿಕೋತ್ಸವವನ್ನು ಸಂಭ್ರಮಿಸುತ್ತಿದೆ. ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ಚಿನ್ನ ಹಾಗೂ ವಜ್ರಾಭರಣಗಳ ಆಯ್ಕೆ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ಚಿನ್ನ ಹಾಗೂ ವಜ್ರಾಭರಣಗಳ ಸಂಗ್ರಹವಿದ್ದು ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವರಣ ಕಲ್ಪಿಸಲಾಗಿದೆ.


ಪುರಾತನ ಆಭರಣಗಳ ವಿಭಾಗ ಪ್ರಾಚಿಯಲ್ಲಿ ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಆಂಟಿಕ್ ಚಿನ್ನಾಭರಣಗಳ ವಿವಿಧ ವಿನ್ಯಾಸಗಳು ಲಭ್ಯವಿದೆ. ಅದೇ ರೀತಿ ಗ್ಲೋ ವಜ್ರಾಭರಣ ವಿಭಾಗದಲ್ಲಿ ಸುಮಾರು 2,000ಕ್ಕೂ ಮಿಕ್ಕಿದ ಡಿಸೈನ್‌ಗಳಲ್ಲಿ ಪ್ರಜ್ವಲಿಸುವ ಅದ್ಭುತ ವಜ್ರಾಭರಣಗಳ ಸಂಗ್ರಹವಿದೆ.
‘ಪಾರ್ಥ’ ಪುರುಷರ ಚಿನ್ನಾಭರಣಗಳ ವಿಭಾಗದಲ್ಲಿ ಪುರುಷರ ಕರ್ಟಿಯರ್ ಕಡ, ಲೇಸರ್ ಕಟ್ಟಿಂಗ್ ಕಡ, ಹೊಸ ವಿನ್ಯಾಸದ ಕ್ಯೂಬನ್ ಚೈನ್ಸ್, ಇಂಡೋ ಇಟಲಿಯನ್ ಚೈನ್ಸ್, ನವರತ್ನ ಉಂಗುರ, ವಿವಿಧ ವಿನ್ಯಾಸದ ಆಂಟಿಕ್ ಪದಕ, ಕಾಸ್ಟಿಂಗ್ ಪದಕ, ಹೊಸ ವಿನ್ಯಾಸದ ವಾಚ್ ಚೈನ್ಸ್ ಅಲ್ಲದೇ ಇನ್ನೂ ಹಲವು ವಿನೂತನ ವಿನ್ಯಾಸದ ಆಭರಣಗಳ ಸಂಗ್ರಹವಿದೆ.ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸದಾ ಸಂಸ್ಥೆ ಬದ್ದವಾಗಿದ್ದು, ಪರಿಪೂರ್ಣತೆ ಮತ್ತು ಅಸಾಧಾರಣ ಕರಕುಶಲತೆಯ ನೈಪುಣ್ಯತೆಯಿಂದ ಹೊರಹೊಮ್ಮಿರುವ ಈ ವಿಶಿಷ್ಟ ಸಂಗ್ರಹ ಎಲ್ಲರ ಕಣ್ಮನ ಸೆಳೆಯುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here