ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಉದ್ಯೋಗಾಧಾರಿತ ಡಿಪ್ಲೋಮ ಇನ್ ಮೊಂಟೆಸರಿ/ನರ್ಸರಿ ಟೀಚರ್ ಟ್ರೈನಿಂಗ್ ಕೋರ್ಸ್ ವಿದ್ಯಾರ್ಥಿನಿಯರಿಗೆ ಉಜ್ವಲ ಭವಿಷ್ಯವನ್ನು ರೂಪಿಸಲು ಭದ್ರ ಬುನಾದಿಯನ್ನು ರೂಪಿಸುತ್ತಿದೆ.
ಇಂದಿನ ಯುಗದಲ್ಲಿ ಗುಣಮಟ್ಟದ ಶಿಕ್ಷಣವೇ ಸಮಾಜದ ಬೆಳವಣಿಗೆ ಶಕ್ತಿಯುತ ಅಸ್ತ್ರ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಪ್ರಾರಂಭಿಕ ಹಂತದ ವಿದ್ಯಾಭ್ಯಾಸ (Early childhood Education) ಅತೀ ಮುಖ್ಯವಾಗುತ್ತಿದೆ. ಈ ಹಂತದಲ್ಲಿ ಮಕ್ಕಳಿಗೆ ಪಾಠದ ಜೊತೆಗೆ ಅವರ ವ್ಯಕ್ತಿತ್ವ, ನೈತಿಕ ಮೌಲ್ಯಗಳು ಮತ್ತು ಭವಿಷ್ಯ ರೂಪಿಸುವ ಪ್ರಕ್ರಿಯೆಗೆ ಹೆಚ್ಚು ಗಮನ ನೀಡಬೇಕಾಗುತ್ತದೆ.
ಈ ಅರಿವಿನೊಂದಿಗೆ ಪ್ರಗತಿ ಸ್ಟಡಿ ಸೆಂಟರ್ ಸಂಸ್ಥೆಯು ನರ್ಸರಿ ಟೀಚರ್ ಟ್ರೈನಿಂಗ್ ಕೋರ್ಸ್‌ನ್ನು ಯಶಸ್ವಿಯಾಗಿ ನಡೆಸುತ್ತಿದ್ದು ಮಕ್ಕಳಿಗೆ ಭಾವಪೂರ್ಣ ಶಿಕ್ಷಣ ನೀಡಬಲ್ಲ ಸಮರ್ಪಕ ಶಿಕ್ಷಕರನ್ನು ರೂಪಿಸುತ್ತಿದೆ.
ಈ ಕೋರ್ಸ್‌ನಿಂದ ದೇಶ- ವಿದೇಶಗಳಲ್ಲಿ ನರ್ಸರಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶ, ಸ್ವತಃ ಪ್ಲೇ ಸ್ಕೂಲ್ ಅಥವಾ ಡೇ ಕೇರ್ ಕೇಂದ್ರ ಆರಂಭಿಸುವ ಅವಕಾಶ, ಅಥವಾ ನರ್ಸರಿ ತರಬೇತಿ ಕೇಂದ್ರವನ್ನು ತೆರೆಯುವ ಅವಕಾಶವನ್ನು ಪಡೆಯಬಹುದು.

ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಇನ್ನಿತರ ಅರ್ಹತೆಯನ್ನು ಪಡೆದಂತಹ ವಿದ್ಯಾರ್ಥಿನಿಯರು ಅಥವಾ ಮಹಿಳೆಯರು ಈ ತರಬೇತಿಯನ್ನು ಪಡೆಯಬಹುದಾಗಿದೆ.
ಪ್ರಗತಿ ಸಂಸ್ಥೆಯು ಕಳೆದ 18 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಹಲವಾರು ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದು ಯಶಸ್ವಿ- ಶಿಕ್ಷಕಿಯರಾಗಿ ದೇಶ- ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಸಂಸ್ಥೆಯ ಉದ್ದೇಶ ಶಿಕ್ಷಣವನ್ನು ಕೇವಲ ಪುಸ್ತಕದ ಮಟ್ಟಕ್ಕೆ ಸೀಮಿತಗೊಳಿಸದೆ ಮಕ್ಕಳಲ್ಲಿ ವ್ಯಕ್ತಿತ್ವ, ಮನುಷ್ಯತ್ವವನ್ನು ರೂಪಿಸುವಂತಹ ಶಿಕ್ಷಕಿಯರನ್ನಾಗಿ ತಯಾರಿಸುವುದಾಗಿದೆ.
NTT ತರಬೇತಿಯು ಮಕ್ಕಳ ಭಾಷಾ ಅಭಿವೃದ್ಧಿ, ಗಣಿತದ ಪ್ರಾಥಮಿಕ ಅರಿವು, ವಿಜ್ಞಾನ ಮತ್ತು ಪರಿಸರ ಜ್ಞಾನ, ನೈತಿಕ ಶಿಕ್ಷಣ, ಸೃಜನಾತ್ಮಕ, ಸಾಂಸ್ಕ್ರತಿಕ ಚಟುವಟಿಕೆಗಳು, ಶಾರೀರಿಕ- ಮಾನಸಿಕ ಬೆಳವಣಿಗೆ, ಸಂಗೀತ, ನೃತ್ಯ, ಚಿತ್ರಕಲೆ ಹಾಗೂ ನೈತಿಕ ಮೌಲ್ಯಗಳ ಬೋಧನೆಗೆ ಹೆಚ್ಚು ಒತ್ತು ನೀಡುತ್ತದೆ.
ತರಬೇತಿಯ ಭೋದನಾ ವಿಧಾನಗಳಲ್ಲಿ ಅನುಭವಿ ಶಿಕ್ಷಕಿಯರಿಂದ ಆಟದ ಮೂಲಕ ಕಲಿಕೆ (Play way method), ಕಥೆಗಳ ಮೂಲಕ ಕಲಿಕೆ (Story telling method). ಸಮೂಹ ಚಟುವಟಿಕೆಗಳು (Group Activities), ಅನುಭವಾತ್ಮಕ ಕಲಿಕೆ (Experiential learning) Rhymes, Art and Craft ಎಂಬ ವಿಶೇಷ ತರಬೇತಿಗಳು ಒಳಗೊಂಡಿದ್ದು, ಅದರ ಜೊತೆಗೆ ವಿವಿಧ ಶಾಲೆಗಳಲ್ಲಿ ಒಂದು ತಿಂಗಳ Internship, ಟೀಚಿಂಗ್ ತರಬೇತಿಯನ್ನು ಒದಗಿಸಿಕೊಡಲಾಗುತ್ತದೆ. NTT ತರಬೇತಿಯ ಜೊತೆಗೆ ಪ್ರಗತಿ ಸಂಸ್ಥೆಯಲ್ಲಿ ಒಂದು ವರ್ಷದ ಉಚಿತ Diploma in computer skill ಹಾಗೂ Spoken English ತರಬೇತಿಯನ್ನು ಸಹ ನೀಡಲಾಗುತ್ತದೆ.
2024-25ನೇ ಶೈಕ್ಷಣಿಕ ವರ್ಷದಲ್ಲಿ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿನಿಯರು ವಿವಿಧ ಶಾಲೆಗಳಲ್ಲಿ ನರ್ಸರಿ ಶಿಕ್ಷಕಿಯರಾಗಿ ನೇಮಕಗೊಂಡಿರುವುದು ಹೆಮ್ಮಯ ವಿಷಯವಾಗಿದೆ.
ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿನಿಯರ ಮನದಾಳ ಮಾತು:
ನಾನು ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ NTT ಕೋರ್ಸ್ ಮಾಡಿದ್ದು, ನನ್ನ ಜೀವನ ತಿರುವು ಬದಲಿಸಿದ ಘಟ್ಟ. ಇಲ್ಲಿ ಶಿಕ್ಷಕರು ನೀಡಿದ ಮಾರ್ಗದರ್ಶನ ಹಾಗೂ ಪ್ರಾಯೋಗಿಕ ತರಬೇತಿಯು ನನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸಿತು. ಇಂದು ನಾನು ಹೋರಿಝೋನ್ ಆಂಗ್ಲ ಮಾದ್ಯಮ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕಿಯಾಗಿ ಆಯ್ಕೆಯಾಗಿರುತ್ತೇನೆ.
ರಹಿಮತ್ ನಿಶಾ
NTT ಮುಗಿಸಿದ ನಂತರ ನನಗೆ ತಕ್ಷಣವೇ ಉದ್ಯೋಗ ದೊರಕಿತು. ನಾನು ಕಲಿತ ಪದಗಳೆಲ್ಲ ನೈಜ ಜೀವನದಲ್ಲಿ ಮಕ್ಕಳೊಂದಿಗೆ ಕೆಲಸ ಮಾಡುವಾಗ ತುಂಬ ಉಪಯುಕ್ತವಾಗಿದೆ. ಈ ಕೋರ್ಸ್ ಕೇವಲ ಸಿದ್ಧಾಂತವಲ್ಲ ನಿಜವಾದ ಅನುಭವ ನೀಡುತ್ತದೆ. ಇಂದು ನಾನು ನೌವರುತುಲ್ ಮದೀನ ಆಂಗ್ಲ ಮಾದ್ಯಮ ಶಾಲೆ ಮಿತ್ತೂರ್‌ನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುತ್ತೇನೆ.
ಅಝ್ವಿನ
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಕಲಿತಿದ್ದು, ನನ್ನ ಆತ್ಮ ವಿಶ್ವಾಸವನ್ನು ಮಾತ್ರ ಹೆಚ್ಚಿಸಿಲ್ಲ, ಬದಲಾಗಿ ನನ್ನ ವ್ಯಕ್ತಿತ್ವವನ್ನು ರೂಪಿಸಿತು. ಮಕ್ಕಳ ಜೊತೆ ಬೆರೆತು ಅವರಿಗೆ ಶಿಕ್ಷಣ ನೀಡುವುದು ಮನಸ್ಸಿಗೆ ಬಹಳ ಸಂತೋಷ ನೀಡುತ್ತಿದೆ. ಇಂದು ನಾನು ಅಲ್ ಬದ್ರಿಯಾ ಆಂಗ್ಲ ಮಾದ್ಯಮ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುತ್ತೇನೆ.
ಫೈಸ ಎಫ್
ಆಸಕ್ತರಿಗೆ ವಾರದ ಎಲ್ಲಾ ದಿನಗಳಲ್ಲಿ ಹಾಗೂ ಉದ್ಯೋಗಸ್ಥರಿಗೆ ಶನಿವಾರ ಅಪರಾಹ್ನ, ಸರಕಾರಿ ರಜಾ ದಿನಗಳಂದು ಹಾಗೂ ದೂರದ ವಿದ್ಯಾರ್ಥಿನಿಯರಿಗೆ ಹಾಸ್ಟಲ್ ವ್ಯವಸ್ಥೆಯೊಂದಿಗೆ ತರಬೇತಿಗಳು ಲಭ್ಯವಿರುತ್ತದೆ. 2025-26ನೇ ಸಾಲಿನ ಮೊಂಟೆಸರಿ ಶಿಕ್ಷಕಿಯರ ತರಬೇತಿಯ ದಾಖಲಾತಿ ಆರಂಭಗೊಂಡಿದ್ದು, ಆಸಕ್ತರು ಕೂಡಲೇ ಪ್ರಗತಿ ಸ್ಟಡಿ ಸೆಂಟರ್‌ನ ಕಛೇರಿಗೆ ಅಥವಾ ದೂರವಾಣಿ ಸಂಖ್ಯೆ 9900109490, 9480106274, 8123899490 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಸಂಸ್ಥೆ ಭಾನುವಾರವೂ ತೆರೆದಿರುತ್ತದೆ.