ಇಂತಹ ಶಿಬಿರಗಳು ಗ್ರಾಮೀಣ ಭಾಗದ ಮಕ್ಕಳಿಗೆ ಸಹಕಾರಿ -ಬಾಬು ಮರಿಕೆ
ಪುತ್ತೂರು: ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಮತ್ತು ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ದರ್ಬೆ ಇದರ ಸಹಯೋಗದಲ್ಲಿ ನಡೆಯುತ್ತಿರುವ “ಅಭಿವ್ಯಕ್ತ -2025ಮಕ್ಕಳ ಬೇಸಿಗೆ ಶಿಬಿರದ ಮೂರನೇ ದಿನವು ಧ್ಯಾನ ಮತ್ತು ಯೋಗಾಸನದೊಂದಿಗೆ ಆರಂಭಗೊಂಡಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಹಂಟ್ಯಾರು ಶಾಲಾ ಎಸ್ .ಡಿ.ಎಂ.ಸಿ ಅಧ್ಯಕ್ಷ ಬಾಬು ಮರಿಕೆ ದೀಪ ಪ್ರಜ್ವಲಿಸಿ ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಸಹಕಾರಿಯಾಗಿದೆ ಎಂದರು.
ವೇದಿಕೆಯಲ್ಲಿ ಭಾಲಾವಲೀಕಾರ್ ಗೌಡ ಸಾರಸ್ವತ ಸಮಾಜ ಸೇವಾ ಸಂಘ ಪುತ್ತೂರು ಇದರ ನಿರ್ದೇಶಕರು ಮೂಲಚಂದ್ರ ಕಾಂಚನ ,ನಾರಾಯಣ ನಾಯಕ್ ,ಕು.ಮಲ್ಲಿಕಾ ಕುಕ್ಕಾಡಿ , ಹರೀಶ್ಚಂದ್ರ ನಾಟೆಕಲ್ಲು , ಮತ್ತು ಮಿನಿಪದವು ಶ್ರೀ ರಕ್ಷಾ ಧ್ಯಾನ ಕೇಂದ್ರದ ಮುಖ್ಯಸ್ಥ ಶೇಷಪ್ಪ ಬಿ.ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದು,ಶಿಬಿರಕ್ಕೆ ಶುಭಹಾರೈಸಿದರು .
ಬಳಿಕ ಸಂಪನ್ಮೂಲ ವ್ಯಕ್ತಿ ಮಂಗಳೂರಿನ ಕಲಾವಿದ ನವೀನ್ ಅಡ್ಕಾರ್ ಕ್ರಾಪ್ಟ್ ಮೂಲಕ ಗೂಡುದೀಪ ರಚಿಸುವ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು . ಮೊದಲ ಕಾರ್ಯಾಗಾರದ ನಂತರ ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ರೊ .ಝೇವಿಯರ್ ಡಿ.ಸೋಜ ” ಮಕ್ಕಳು ಮೊಬೈಲ್ ಗೇಮ್ ನಲ್ಲಿ ತೊಡಗಿಸಿಕೊಳ್ಳುವುದರಿಂದ ಆಗುವ ದುಷ್ಪರಿಣಾಮಗಳ ಕುರಿತು ಶಿಬಿರಾರ್ಥಿಗಳಿಗೆ ತಿಳಿಸಿದರು.

ಪೂರ್ಣಿಮಾ ಕೂಂಕ್ಯ ಅಭಿನಯ ಗೀತೆ ,ಹಾಡು ,ಕಥೆಯ ಮೂಲಕ ಪುಟಾಣಿಗಳನ್ನು ರಂಜಿಸಿದರು. ನಾಯಕತ್ವ ಕುರಿತು ಮಾಹಿತಿ ನೀಡಿದರು.ಅಪರಾಹ್ನದ ಬಳಿಕ ಸೌಗಂಧಿಕಾ ನರ್ಸರಿ ಪರ್ಪುಂಜದಲ್ಲಿ ಸಂಪನ್ಮೂಲ ವ್ಯಕ್ತಿ ಚಂದ್ರ ಸೌಗಂಧಿಕಾರವರು ವಿವಿಧ ಔಷಧೀಯ ಸಸ್ಯಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಹರಿಪ್ರಸಾದ್ ಪುಂಡಿಕಾಯಿ ಉಪಸ್ಥಿತರಿದ್ದರು. ಭವ್ಯಶ್ರೀ ಮರಿಕೆ ಸಹಕರಿಸಿದರು.ಶಿಬಿರ ಸಂಯೋಜಕ ಗಣೇಶ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.