ರಂಗಗೀತೆ ಮತ್ತು ರಂಗ ಅಭಿನಯದೊಂದಿಗೆ ಸಂತಸಪಟ್ಟ ಪುಟಾಣಿಗಳು ..
ಪುತ್ತೂರು: ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಮತ್ತು ಶ್ರೀ ಸರಸ್ವತಿ ಚಾರಿಟೇಬಲ್ ದರ್ಬೆ ಇದರ ಸಹಯೋಗದಲ್ಲಿ ನಡೆಯುತ್ತಿರುವ “ಅಭಿವ್ಯಕ್ತ -2025ಮಕ್ಕಳ ಬೇಸಿಗೆ ಶಿಬಿರದ ನಾಲ್ಕನೇ ದಿನ ಪತಂಜಲಿ ಯೋಗ ಸಮಿತಿಯ ಜ್ಞಾನೇಶ್ ವಿಶ್ವಕರ್ಮ,ಮುರಳೀಧರ ಆಚಾರ್ಯ, ಅಶ್ವಿನಿ , ರೇಖಾ ಪ್ರಭು ಸಂಪ್ಯ ಇವರ ಧ್ಯಾನ ಮತ್ತು ಯೋಗಾಸನ ತರಬೇತಿಯೊಂದಿಗೆ ಆರಂಭಗೊಂಡಿತು .

ಸಭಾ ಕಾರ್ಯಕ್ರಮದಲ್ಲಿ ಶ್ರೀ ಸರಸ್ವತಿ ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಜಯಂತಿ ನಾಯಕ್ ಪುಂಡಿಕಾಯಿ ,ಭಾಲಾವಲೀಕಾರ್ ಗೌಡ ಸಾರಸ್ವತ ಸಮಾಜ ಸೇವಾ ಸಂಘದ ನಿರ್ದೇಶಕಿ ಸುಮಾಪ್ರಕಾಶ್ ವಾಗ್ಲೆ ,ರಾಧಾಕೃಷ್ಣ ನಾಯಕ್ ಸುಳ್ಳಿ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ಮೈಸೂರು ರಂಗಾಯಣದಲ್ಲಿ ರಂಗ ತರಬೇತಿ ಪಡೆದ ರಂಗಶಿಕ್ಷಕ ರಾಕೇಶ್ ಆಚಾರ್ಯ ಬನಾರಿ ರಂಗಗೀತೆ ಮತ್ತು ಅಭಿನಯದ ಮೂಲಕ ಶಿಬಿರಾರ್ಥಿಗಳನ್ನು ರಂಜಿಸಿದರು.ಸಂಪನ್ಮೂಲ ವ್ಯಕ್ತಿ ದಿವ್ಯಜ್ಯೋತಿ ವಿವಿಧ ಚಟುವಟಿಕೆಗಳ ಮೂಲಕ ಸ್ಪೋಕನ್ ಇಂಗ್ಲೀಷ್ ತರಗತಿಯನ್ನು ನಡೆಸಿಕೊಟ್ಟರು .ವಿವೇಕಾನಂದ ಸಿ.ಬಿ.ಎಸ್.ಸಿ ಶಾಲೆಯ ಶಿಕ್ಷಕಿ ಸ್ವಾತಿ ಚಿತ್ರಕಲೆ ,ಕ್ರಾಪ್ಟ್ ,ಅಭಿನಯ ಗೀತೆಯ ಮೂಲಕ ಪುಟಾಣಿಗಳನ್ನು ರಚಿಸಿದರು .
ಅವನೀಶ್ ನಾಯಕ್ ಸುಬ್ರಹ್ಮಣ್ಯ ಮತ್ತು ತಂಡದವರಿಂದ ಬೀದಿನಾಟಕ ತರಬೇತಿ ನಡೆಯಿತು .ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲಾ ಮುಖ್ಯಗುರು ನಳಿನಿ ವಾಗ್ಲೆ ಅಭಿನಯ ಗೀತೆ ಮತ್ತು ಕತೆ ಹೇಳುವ ಮೂಲಕ ಪುಟಾಣಿಗಳ ಮನಗೆದ್ದರು.ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ಹರಿಪ್ರಸಾದ್ ಪುಂಡಿಕಾಯಿ ಉಪಸ್ಥಿತರಿದ್ದರು . ಭವ್ಯಶ್ರೀ ಮರಿಕೆ ಸಹಕರಿಸಿದರು .ಶಿಬಿರ ಸಂಯೋಜಕ ಗಣೇಶ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು .