ಪುತ್ತೂರು: ರಾಜ್ಯಮಟ್ಟದ ಮಹಿಳೆಯರ ಲೀಗ್ ಕ್ರಿಕೆಟ್ ಟೂರ್ನಮೆಂಟ್ ನ ಮಂಗಳೂರು ವಲಯ ಕ್ರಿಕೆಟ್ ತಂಡಕ್ಕೆ ಪುತ್ತೂರಿನ ಏಂಜಲಿಕಾ ಮೆಲಾನಿ ಪಿಂಟೊ, ಅನಘಾ ಕೆ.ಎನ್, ಶ್ರೀಶ ಆರ್.ಎಸ್ ರವರು ಆಯ್ಕೆಯಾಗಿದ್ದಾರೆ. ಎಡಗೈ ಬ್ಯಾಟರ್ ಏಂಜಲಿಕಾ ಮೆಲಾನಿ ಪಿಂಟೊ, ಎಡಗೈ ವೇಗದ ಬೌಲರ್ ಅನಘ ಕೆ.ಎನ್ ಹಾಗೂ ಅಲೌರೌಂಡರ್ ಬಲಗೈ ಬ್ಯಾಟರ್, ಬೌಲರ್ ಶ್ರೀಶ ಆರ್.ಎಸ್ ರವರು ಶಿವಮೊಗ್ಗದಲ್ಲಿ ಎಪ್ರಿಲ್ 18 ರಿಂದ 29ರ ವರೆಗೆ ನಡೆಯುವ ರಾಜ್ಯಮಟ್ಟದ ಮಹಿಳೆಯರ ಕ್ರಿಕೆಟ್ ಟೂರ್ನಮೆಂಟ್ ನ ಮಂಗಳೂರು ವಲಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಇವರುಗಳಿಗೆ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಲ್ಯಾಸ್ ಪಿಂಟೊರವರು ತರಬೇತಿ ನೀಡುತ್ತಿದ್ದಾರೆ ಎಂದು ಯೂನಿಯನ್ ಕ್ರಿಕೆಟರ್ಸ್ ಪುತ್ತೂರು ಇದರ ಕಾರ್ಯದರ್ಶಿ ವಿಶ್ವನಾಥ ನಾಯಕ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಂಜಲಿಕಾ ಮೆಲಾನಿರವರು ಕೊಂಬೆಟ್ಟು ನಿವಾಸಿ, ಸಂತ ಫಿಲೋಮಿನಾ ಕಾಲೇಜಿನ ದೈಹಿಕ ನಿರ್ದೇಶಕ ಡಾ.ಎಲ್ಯಾಸ್ ಪಿಂಟೊ, ಸಂತ ಫಿಲೋಮಿನಾ ಪ್ರೌಢಶಾಲೆಯ ಶಿಕ್ಷಕಿ ಮೋಲಿ ಫೆರ್ನಾಂಡೀಸ್ ರವರ ಪುತ್ರಿ, ಅನಘ ಕೆ.ಎನ್ ರವರು ಮರೀಲು ನಿವಾಸಿ ನವೀನ್ ಕುಮಾರ್, ಕವಿತಾ ಡಿ.ರವರ ಪುತ್ರಿ, ಶೀಶ ಆರ್.ಎಸ್ ರವರು ಎಪಿಎಂಸಿ ರಸ್ತೆಯ ರವಿ ಪ್ರೊವಿಷನಲ್ ಸ್ಟೋರ್ ಮಾಲಕ ರವಿಚಂದ್ರ, ಶ್ವೇತ ರವರ ಪುತ್ರಿ.