ಪುತ್ತೂರು: ಸವಣೂರು ಗ್ರಾಮದ ಪರಣೆ- ತುಳುಸಿಪುರಂನಲ್ಲಿ ಎ. 14 ರಂದು ಬಿಸು ಆಚರಣೆ ನಡೆಯಿತು. ಬೆಳಿಗ್ಗೆ ಬಿಸು ಕಣಿ ಇಡಲಾಯಿತು.
ವಿವಿಧ ಭಜನಾ ತಂಡಗಳಿಂದ ಭಜನೆ, ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಧ್ಯಾಹ್ನ ಸಹಭೋಜನ ನಡೆಯಿತು.

ತುಳುಸಿಪುರಂ ಶ್ರೀ ದೇವಿ ಸೇವಾ ಸಮಿತಿಯ ಸಂಚಾಲಕ ಪದ್ಮಯ್ಯ ಗೌಡ ಪರಣೆ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸತೀಶ್ ಬಲ್ಯಾಯ, ಸವಣೂರು ಶ್ರೀ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ರಾಘವ ಗೌಡ ಸವಣೂರು, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ದಿವಾಕರ ಬಸ್ತಿ , ಕಾಯದರ್ಶಿ ಕೀರ್ತನ್ ಕೋಡಿಬೈಲು, ಸಾಕ್ಷಾತ್ ಶಿವ ಭಜನಾ ಮಂಡಳಿಯ ಜಯoತ್ ವೈ , ಮನ್ಮಥ ತುಳುಸಿಪುರಂ, ಯಶ್ವಿನಿ ಮನ್ಮಥ ತುಳುಪುರಂ , ಬಾಲಕೃಷ್ಣ ಬಿ ಕೆ ಮಹಾಬಲ ಗೌಡ, ತೇಜಸ್ ಚಾಪಲ್ಲ, ಪ್ರಥಮ್ ಕಾಯರ್ಗ ಸುಂದರ ಶೆಟ್ಟಿ ಬರಮೇಲು, ಜಯರಾಮ ಗೌಡ, ವಸಂತಿ ಮೆದು , ಚೆನ್ನಪ್ಪ ಗೌಡ ಪರಣೆ ಸಹಿತ ನೂರಾರು ಮಂದಿ ಭಾಗವಹಿಸಿದರು.