ಪುತ್ತೂರು ಜಾತ್ರೆಯಲ್ಲಿ ಮನರಂಜಿಸಿದ ಸುಸ್ವರ ಮೆಲೋಡಿಸ್‌ನ ಭಕ್ತಿ ಭಾವ ಗಾನ ಸಂಭ್ರಮ

0

ಪುತ್ತೂರು: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಆರನೇ ದಿನದ ಸಂಭ್ರಮದಲ್ಲಿ ಎ.15ರಂದು ಸಂಜೆ 6 ಕ್ಕೆ ಪುತ್ತೂರು ನಟರಾಜ ವೇದಿಕೆಯಲ್ಲಿ ಉಪ್ಪಿನಂಗಡಿಯ ಸುಸ್ವರ ಮೆಲೋಡೀಸ್ ತಂಡದವರಿಂದ ಭಕ್ತಿಭಾವ ಗಾನ ಸಂಭ್ರಮ ನಡೆಯಿತು.

ಬಿ.ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು ಸಾರಥ್ಯದಲ್ಲಿ ವೈಶಾಲಿ ಎಂ.ಕುಂದರ್ ನಿರ್ದೇಶನದಲ್ಲಿ ಮೂಡಿಬಂದ ಈ ಸಂಗೀತ ಕಾರ್ಯಕ್ರಮದಲ್ಲಿ ಗಾಯಕರಾಗಿ ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು, ವೈಶಾಲಿ ಎಂ.ಕುಂದರ್, ಬಾಲಪ್ರತಿಭೆ ಸ್ಮೃತಿ ಪಲ್ಲತ್ತಾರು, ಮೋಹಿನಿ ಉಪ್ಪಿನಂಗಡಿ, ಉಷಾಲಕ್ಷ್ಮಣ್ ಬೆಳ್ಳಿಪ್ಪಾಡಿ ಭಾಗವಹಿಸಿದ್ದರು. 1 ಗಂಟೆಗಳ ಕಾಲ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಗಾಯಕರುಗಳು ತಮ್ಮ ಸುಮಧುರ ಕಂಠಸಿರಿಯಲ್ಲಿ ಭಕ್ತಿಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷರನ್ನು ಮನರಂಜಿಸಿದರು. ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು ಕಾರ್ಯಕ್ರಮ ನಿರೂಪಿಸಿದರು. ಕಲಾವಿದರಿಗೆ ದೇವಳದ ಪ್ರಸಾದ ನೀಡಿ ಸತ್ಕರಿಸಲಾಯಿತು.

LEAVE A REPLY

Please enter your comment!
Please enter your name here