ಉಪ್ಪಿನಂಗಡಿ: ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಜೆ.ಇ.ಇ. ಮೈನ್ಸ್ 2, 2024-25 ಪರೀಕ್ಷೆಯಲ್ಲಿ ಉತ್ತಮ ಸಾಧನೆ ಗೈದಿರುತ್ತಾರೆ.
ಒಟ್ಟು 15 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ. ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ಜೆ.ಇ.ಇ 2 ಪರೀಕ್ಷೆ ಬರೆದ ಒಟ್ಟು 16 ವಿದ್ಯಾರ್ಥಿಗಳಲ್ಲಿ ರಾಮಕುಂಜ ನಿವಾಸಿ ಶಿವರಾಮ ನಾಯ್ಕ ಕೆ ಮತ್ತು ಯಶೋಧ ಎಮ್ ದಂಪತಿಗಳ ಪುತ್ರ ಸಂಪತ್ ಕೆ ಎಸ್ – 18628 ಹಾಗೂ ಉರುವಾಲು ನಿವಾಸಿಯಾದ ಮನೋಹರ ರಾವ್ ಎ ಮತ್ತು ಆಶಾಲತ ದಂಪತಿಗಳ ಪುತ್ರಿ ಕವನ ರಾವ್– 21095 All India Rank ಪಡೆದು ಕಾಲೇಜಿಗೆ ಹೆಮ್ಮೆ ತಂದಿರುತ್ತಾರೆ.
ಅಲ್ಲದೆ ಪೆರಬೆ ನಿವಾಸಿಯಾದ ನಳಿನಾಕ್ಷಿ ಕೆ ಮತ್ತು ವೀರಪ್ಪ ಗೌಡ ದಂಪತಿಗಳ ಪುತ್ರಿ ಪ್ರಾಪ್ತಿ ಪಿ ವಿ 89.2 ಪರ್ಸಂಟೈಲ್, ನೆಕ್ಕಿಲಾಡಿ ನಿವಾಸಿಯಾದ ಕೃಷ್ಣ ಯು ಮತ್ತು ವಿಮಲ ದಂಪತಿಗಳ ಪುತ್ರ ಯಕ್ಷಿತ್ – 86.40 ಪರ್ಸಂಟೈಲ್ ಪಡೆದಿದ್ದು. ಜೆ. ಇ. ಇ ಅಡ್ವಾನ್ಸ್ ಪರೀಕ್ಷೆಗೆ ಆಯ್ಕೆಯಾಗಿರುತ್ತಾರೆ. ಇವರ ಪ್ರಶಂಸನೀಯ ಸಾಧನೆಯನ್ನು ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಎಚ್. ಕೆ. ಪ್ರಕಾಶ್ ರವರು ಅಭಿನಂದಿಸಿರುತ್ತಾರೆ.