ಪುತ್ತೂರು : ಡಿಸೆಂಬರ್‌ನಲ್ಲಿ ಕುಟ್ರುಪ್ಪಾಡಿ ಗ್ರಾಮದ ಕೇಪು ದೇವಸ್ಥಾನದ ವಠಾರದಲ್ಲಿ ನಡೆಯಲಿರುವ ಕಡಬ ತಾಲೂಕು ಮಟ್ಟದ ಪ್ರಥಮ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಸವಣೂರು ಬೊಳ್ಳಿ ಬೊಲ್ಪು ತುಳುಕೂಟದ ಆಶ್ರಯದಲ್ಲಿ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜ್ ಕ್ರೀಡಾಂಗಣದಲ್ಲಿ ನಡೆಯಲಿರುವ ತಾಲೂಕು ಮಟ್ಟದ ತುಳು ಆಟೋಟ ಸ್ಪರ್ಧೆಯ ಪೂರ್ವಭಾವಿ ಸಭೆಯು ಸವಣೂರು ಯುವ ಸಭಾಭವನದಲ್ಲಿ ನ 1 ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸವಣೂರು ಬೊಳ್ಳಿಬೊಲ್ಪು ತುಳುಕೂಟದ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯ ಮಾತನಾಡಿ, ತುಳು ಭಾಷೆ ಶ್ರೀಮಂತ ಭಾಷೆ.ನಮ್ಮ ಆಚಾರ ವಿಚಾರ ಸಂಸ್ಕೃತಿಗಳು ತುಳುಭಾಷೆಯೊಂದಿಗೆ ಬೆಸೆದುಕೊಂಡಿದೆ.ಈ ನಿಟ್ಟಿನಲ್ಲಿ ಕಡಬ ತಾಲೂಕು ಮಟ್ಟದ ಪ್ರಥಮ ತುಳು ಸಮ್ಮೇಳನದ ಅಂಗವಾಗಿ ಸವಣೂರಿನಲ್ಲಿ ನಡೆಯುವ ತುಳು ಆಟೋಟ ಸ್ಪರ್ಧೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ವಿನಂತಿಸಿದರು.
ರಾಮಕುಂಜ ನೇತ್ರಾವತಿ ತುಳುಕೂಟದ ಅಧ್ಯಕ್ಷ ಸೇಸಪ್ಪ ರೈ ರಾಮಕುಂಜ ಅವರು ತುಳು ಸಮ್ಮೇಳನದ ಔಚಿತ್ಯ ಹಾಗೂ ರೂಪುರೇಷೆ , ಸ್ಪರ್ಧಾ ನಿಯಮಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ತೆಗ್‌ರ್ ತುಳುಕೂಟ ನೂಜಿಬಾಳ್ತಿಲ ಇದರ ಅಧ್ಯಕ್ಷ ಉಮೇಶ್ ಶೆಟ್ಟಿ ಸಾಯಿರಾಂ, ಕಡಬ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದ್ಮಪ್ಪ ಗೌಡ, ಕಿಶೋರ್ ಕುಮಾರ್ ಬಿ, ತಾರಾನಾಥ ಸವಣೂರು, ಮಹೇಶ್ ಕೆ.ಸವಣೂರು, ದಯಾನಂದ ಮೆದು, ಚೇತನ್ ಕುಮಾರ್ ಕೋಡಿಬೈಲು, ರಾಮಕೃಷ್ಣ ಪ್ರಭು, ತಾರಾನಾಥ ಕಾಯರ್ಗ, ಸುರೇಶ್ ರೈ ಸೂಡಿಮುಳ್ಳು, ದಿವಾಕರ ಬಸ್ತಿ, ಜಗದೀಶ್ ಇಡ್ಯಾಡಿ, ಪ್ರವೀಣ್ ಚೆನ್ನಾವರ ಉಪಸ್ಥಿತರಿದ್ದರು. ಸವಣೂರು ಬೊಳ್ಳಿಬೊಲ್ಪು ತುಳುಕೂಟದ ಪ್ರಧಾನ ಕಾರ್ಯದರ್ಶಿ ಉಮಾಪ್ರಸಾದ್ ರೈ ನಡುಬೈಲು ವಂದಿಸಿದರು.
