ಪುತ್ತೂರು ತಾಲೂಕು ಹಿಂದೂ ಧರ್ಮ ಶಿಕ್ಷಣ ಸಮಿತಿ ರಚನೆ- ಸಭಾ ಕಾರ್ಯಕ್ರಮ

0

ಪುತ್ತೂರು: ಶೃಂಗೇರಿ ಜಗದ್ಗುರು ವಿಧುಶೇಖರ ಭಾರತೀ ಸನ್ನಿಂದಾನಂಗಳವರ ನಿರ್ದೇಶನದೊಂದಿಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅವರ ಸಂಚಾಲಕತ್ವದಲ್ಲಿ ಹಿಂದೂ ಧರ್ಮದ ಸರ್ವ ಸಮಾಜಗಳ ಮಹಾಸಭೆ, ತಾಲೂಕು ಹಿಂದೂ ಧರ್ಮ ಶಿಕ್ಷಣ ಸಮಿತಿ ರಚನೆ ,ಉದ್ಘಾಟನಾ ಕಾರ್ಯಕ್ರಮ ಏ.20ರಂದು ತೆಂಕಿಲದ ಸ್ವಾಮಿ ಕಲಾ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶ್ರೀ ಆದಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ದೀಪ ಪ್ರಜ್ವಲಿಸಿ ಆರಂಭಿಸಲಾಯಿತು.ಪ್ರಾಸ್ತಾವಿಕವಾಗಿ ಸುಬ್ರಹ್ಮಣ್ಯ ನಟ್ಟೋಜ ಅವರು ಮಾತನಾಡಿ,ಇಂದು ಹಿಂದೂಗಳಿಗೆ ಧರ್ಮ ಶಿಕ್ಷಣ ದೊರೆಯುತ್ತಿಲ್ಲ ಇದನ್ನು ಮನಗಂಡ ಈಗಿನ ಶೃಂಗೇರಿ ಶ್ರೀಗಳು ಅದನ್ನು ಸಮಾಜಕ್ಕೆ ನೀಡುವ ನಿಟ್ಟಿನಲ್ಲಿ ಗುರುಗಳು ಗ್ರಾಮ ಗ್ರಾಮದಲ್ಲಿ ಶಿಕ್ಷಣ ನೀಡುವಂತೆ ಯೋಚನೆ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರ, ಭಜನಾ ಮಂದಿರ, ದೇವಸ್ಥಾನ, ದೈವಸ್ಥಾನಗಳಲ್ಲಿ ಧರ್ಮ ಶಿಕ್ಷಣಕ್ಕೆ ಮಹತ್ವ ನೀಡುವಲ್ಲಿ ಕೆಲಸಗಳು ಆಗಬೇಕು ಎಂದರು.

ಕರ್ನಾಟಕದಲ್ಲೆ ಮೊತ್ತ ಮೊದಲ ಎಂಬಂತೆ ಧರ್ಮ ಶಿಕ್ಷಣ ಯೋಚನೆ ಪುತ್ತೂರಿನಲ್ಲಿ ಸಾಕಾರಗೊಳ್ಳುತ್ತಿದೆ. ಧರ್ಮ ಶಿಕ್ಷಣದ ಸಿಲೆಬಸ್‌ ನಲ್ಲಿ ತರಗತಿಯಲ್ಲಿ ನಡೆಯಲಿದೆ. ಅದು 1ರಿಂದ 4, 5ರಿಂದ 8ರವರೆಗೆ, 9ರಿಂದ 12 ಹೀಗೆ ಮೂರು ತರಗತಿಗಳ ರೀತಿಯಲ್ಲಿ ಶಿಕ್ಷಣವಿದೆ. ಈಗಾಗಲೇ ಪುತ್ತೂರು, ಕಡಬ ತಾಲೂಕಿನಾದ್ಯಾಂತ ಗ್ರಾಮ ಗ್ರಾಮಗಳಲ್ಲಿ ಹಿಂದೂ ಧರ್ಮ ಶಿಕ್ಷಣ ಆರಂಭದ ಕುರಿತು ಮಾಹಿತಿ, ಸಮಿತಿ ರಚನೆ ಮಾಡಲಾಗಿದೆ. ಗ್ರಾಮಗಳಲ್ಲಿ ಉತ್ತಮ ಪ್ರೋತ್ಸಾಹ, ಸ್ಪಂದನೆ ದೊರೆತಿದೆ. ಹೊಸ ಸಮಿತಿಯು ಉತ್ತಮ ರೀತಿಯಲ್ಲಿ ಕೆಲಸ ಮಾಡಲಿದೆ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ಮಾತನಾಡಿ,ಧಾರ್ಮಿಕ ಶಿಕ್ಷಣ ಪಡೆಯುವ ನೀಡುವ ಮೂಲಕ ನಮ್ಮನ್ನು ನಾವು ಅರಿತುಕೊಳ್ಳಬೇಕು . ಮಾನವನ ಶರೀರ ಫಲದಿಂದ ಸಿಕ್ಕಿದ ಪ್ರಾಪ್ರ್ತಿಮಾನವತ್ವದಿಂದ ಮಾಧವನ ಕಡೆಗೆ ಸಾಗುವುದೇ ಜೀವನದ ಸಾಧನೆ ಎಂದರು.

ಸಮಿತಿಯ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ,ಹಿಂದೂ ವಿಚಾರಾಧಾರೆ ನಮ್ಮ ಮಕ್ಕಳಿಗೆ, ಸಮಾಜಕ್ಕೆ ಸಿಗುತ್ತಿಲ್ಲ, ಮುಸ್ಲಿಂ ಸಮುದಾಯ ಪಾಲಿಸುವ ಕಟ್ಟುಪಾಡುಗಳಿಗೆ ಹೋಲಿಸಿದರೆ ನಮ್ಮಲ್ಲಿ ಇರುವ ಕಟ್ಟುಪಾಡುಗಳಿಗೆ ಹೋಲಿಸಿದರೆ ನಮ್ಮಲ್ಲಿ ಉತ್ತರವಿಲ್ಲ ಅದನ್ನು ನಮ್ಮ ಸಮಾಜ ಕಂಡುಕೊಳ್ಳುವ ಅಗತ್ಯವಿದೆ. ನಾನು ಮೊದಲು ಹಿಂದೂ ಆ ಬಳಿಕ ಎಲ್ಲವೂ ಎಂದರು.ಈ ದಿನ ಚರಿತ್ರೆಯ ಪುಟಗಳಲ್ಲಿ ಬರೆದಿಡುವಂತಹ ದಿನ.ಈ ದಿನದ ಕಾರ್ಯಕ್ರಮ ಮುಂದೆ ಒಂದು ಇತಿಹಾಸವನ್ನು ಬರೆಯಲಿದೆ.ಮುಂದಿನ ತಲೆಮಾರು ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ, ಸಮಿತಿಯ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಮಾತನಾಡಿ,ಹಿಂದೂ ಧರ್ಮ ಶಿಕ್ಷಣದಲ್ಲಿ ನಮಗೆ ಯಾರಿಗೂ ಅರಿವಿಲ್ಲ.ಒಟ್ಟಾರೆ ಆಚರಣೆ ಮಾಡುತ್ತಿದ್ದೇವೆ.ಹೇಗೆ ಆಚರಿಸಬೇಕೆಂದು ನಮಗೆ ತಿಳಿದಿಲ್ಲ ಎಂದರು.ನಮ್ಮ ಗ್ರಾಮಗಳಲ್ಲಿ ತಾಯಂದಿರು ನಮ್ಮ ಮಕ್ಕಳಿಗೆ ಶಿಕ್ಷಣ ಬೇಕೆಂದು ಹೇಳುವ ಅನೇಕ ತಾಯಂದಿರು ಇದ್ದಾರೆ .ನಮಗೊಂದು ಜವಬ್ದಾರಿ ಇದೆ. ನಮ್ಮ ಪೀಳಿಗೆ ಧರ್ಮ ಶಿಕ್ಷಣದಿಂದ ವಂಚಿತರಾದರೂ ಮುಂದಿನ ಪೀಳಿಗೆಗೆ ತಿಳಿಸುವ ಅವಕಾಶ ಸಿಕ್ಕಿದೆ ಅದನ್ನು ತಪ್ಪದೇ ಮಾಡೋಣ ಎಂದರು.

ವೇದಿಕೆಯಲ್ಲಿ ಕಾರ್ಯದರ್ಶಿ ಶೈಲೆಶ್‌ ಜೆ.ರಾವ್‌ ,ತಾಲೂಕು ಮಹಿಳಾ ಪ್ರಮುಖ್‌ ಪ್ರಭಾವತಿ,ಖಜಾಂಜಿ ಮಾಧವ ಸ್ವಾಮಿ ಉಪಸ್ಥಿತರಿದ್ದರು.ವೇದಿಕೆಯ ಮುಂಭಾಗದಲ್ಲಿ ಅನೇಕ ರಾಜಕೀಯ ಪ್ರಮುಖರು, ಧಾರ್ಮಿಕ ಮುಖಂಡರು, ಅಭ್ಯಾಗತರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ತಾಲೂಕು ಮಹಿಳಾ ಪ್ರಮುಖ್‌ ಪ್ರಭಾವತಿ ಪ್ರಾರ್ಥಿಸಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ಸ್ವಾಗತಿಸಿ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ವಂದಿಸಿ, ದಿನೇಶ್‌ ಕುಮಾರ್‌ ಜೈನ್‌ ‌ ನಿರೂಪಿಸಿದರು.

ಪುತ್ತೂರು ತಾಲೂಕಿನ ಮೊಟ್ಟ ಮೊದಲ ಸಮಿತಿ ರಚನೆ:
ಕಾರ್ಯಕ್ರಮದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.ಗೌರವ ಅಧ್ಯಕ್ಷರಾಗಿ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ,ಅಧ್ಯಕ್ಷರಾಗಿ ದಂಬೆಕಾನ ಸದಾಶಿವ ರೈ,ಸಂಚಾಲಕರಾಗಿ ಸುಬ್ರಹ್ಮಣ್ಯ ನಟ್ಟೋಜ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್‌,ಸಂಯೋಜಕರಾಗಿ ಹೇಮನಾಥ ಶೆಟ್ಟಿ ಕಾವು, ಕಾರ್ಯದರ್ಶಿ ಶೈಲೆಶ್ ಜಿ ರಾವ್, ಸುರೇಶ್‌ ಕೆಮ್ಮಿಂಜೆ,ಜತೆ ಕಾರ್ಯದರ್ಶಿಯಾಗಿ ವಿಶ್ವೇಶ್ವರ ಭಟ್, ಖಜಾಂಜಿಯಾಗಿ, ಎ ಮಾಧವ ಸ್ವಾಮಿ ,ಉಪಾಧ್ಯಕ್ಷರಾಗಿ ಸಂಜೀವ ಮಠಂದೂರು ಚಿದಾನಂದ ಬೈಲಾಡಿ, ಕೂರೇಲು ಸಂಜೀವ ಪೂಜಾರಿ,ಡಾ. ಕೃಷ್ಣ ಪ್ರಸನ್ನ,ಇಂದು ಶೇಖರ್‌, ಕೃಷ್ಣಪ್ರಸಾದ್‌ ಬೇಟ್ಟ, ಎವಿಕೆ ನಾರಾಯಣ, ಮಂಜುನಾಥ ನಾಯ್ಕ,ನಾಗೇಶ್‌ ಭಟ್‌, ಅಣ್ಣಪ್ಪ, ಮೋಹನ್ ನೆಲ್ಲಿಗುಂಡಿ, ಅವಿನಾಶ್‌ ಕೊಡಿಂಕಿರಿ,ದೀಕ್ಷಿತ್‌ ಹೆಗ್ಡೆ, ರಂಜೀತ್‌ ಬಂಗೇರ, ಪಿ.ಜಿ ಜಗನ್ನಿವಾಸ ರಾವ್‌, ಬುಡಿಯಾರ್‌ ರಾಧಕಷ್ಣ ರೈ, ಭಾಸ್ಕರ ಆಚಾರ್ಯ ಹಿಂದಾರ್‌,ನವೀನ್‌ ಕುಲಾಲ್‌, ಸತೀಶ್‌ ರಾವ್‌, ಶಶಾಂಖ ಕೊಟೇಚಾ, ರಾಧಕೃಷ್ಣ ಆಳ್ವ ಆಯ್ಕೆ ಮಾಡಲಾಯಿತು.


ಗೌರವ ಸಲಹೆಗಾರರಾಗಿ ಮುಗೇರೋಡಿ ಬಾಲಕೃಷ್ಣ ರೈ, ಕೇಶವ ಪ್ರಸಾದ್‌ ಮುಳಿಯ, ಎನ್‌ ಕೆ ಜಗನ್ನೀವಾಸ ರಾವ್‌, ಬಲರಾಮ್‌ ಆಚಾರ್ಯ, ಪಂಜಿಗುಡ್ಡೆ ಈಶ್ವರ ಭಟ್‌, ಡಾ ಸುರೇಶ್‌ ಪುತ್ತೂರಾಯ, ಜಯಸೂರ್ಯ ರೈ, ಯು.ಪಿ ಶಿವಾನಂದ್‌ ನೇಮಿಸಲಾಯಿತು, ಶೈಕ್ಷಣಿಕ ಸಲಹೆಗಾರರಾಗಿ ಡಾ ಶ್ರೀಶ ಕುಮಾರ್‌, ವಾತ್ಸಲಾ ರಾಜ್ಞಿ, ವರದರಾಜ್‌ ಚಂದ್ರಗಿರಿ, ಗಿರಿಶಂಕರ್‌ ಸುಲಾಯ, ಡಾ. ರಾಜೇಶ್‌ ಬೆಜ್ಜಂಗಳರವರನ್ನು ನೇಮಿಸಲಾಯಿತು.


LEAVE A REPLY

Please enter your comment!
Please enter your name here