ಕೆಯ್ಯೂರು: ಇರ್ದೆ ಗ್ರಾಮದ ಬೈಲಾಡಿ ನಿವಾಸಿ ಆಯುರ್ವೇದ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ “ನೋವಿನ ಎಣ್ಣೆ” ಖ್ಯಾತಿಯ ಬೈಲಾಡಿ ಮನೆತನದ ಡಾ. ಧನ್ಯ ಬೈಲಾಡಿ ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಕರ್ನಾಟಕ ಬೆಂಗಳೂರು ಇವರು ನಡೆಸಿದ ಅಂತಿಮ ಸ್ನಾತಕೋತರ (ಎಂ ಡಿ) ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಅವರಿಗೆ ಅವರ ನಿವಾಸದಲ್ಲಿ ಕೆಯ್ಯೂರು ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಫಲಪುಷ್ಪ ,ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೆಯ್ಯೂರು ವಲಯ ಕಾಂಗ್ರೆಸ್ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು, ಕಾರ್ಯದರ್ಶಿ ಹನೀಪ್ ಕೆ ಎಂ, ಕೆಯ್ಯೂರು ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೂಪಾ ಎಸ್ ರೈ , ಕಾರ್ಯದರ್ಶಿ ಧರಣಿ ಸಿ.ಬಿ, ನಿಕಟ ಪೂರ್ವ ಅಧ್ಯಕ್ಷರಾದ ಎ.ಕೆ ಜಯರಾಮ ರೈ ಕೆಯ್ಯೂರು, ಸಂತೋಷ್ ಕುಮಾರ್ ರೈ ಇಳಂತಾಜೆ, ಶೀನಪ್ಪ ರೈ ದೇವಿ ನಗರ, ಅಬ್ದುಲ್ ಖಾದರ್ ಮೇರ್ಲ, ದಾಮೋದರ ಪೂಜಾರಿ ಕೆಂಗುಡೇಲು, ಶೇಷಪ್ಪ ದೇರ್ಲ, ಬಟ್ಯಪ್ಪ ರೈ ದೇರ್ಲ, ಉದಯ ಕೆಂಗುಡೇಲು, ಅಬ್ಬುಬಕ್ಕರ್ ಎಂಎಂ, ವಿಶ್ವನಾಥ್ ಪೂಜಾರಿ ಕೆಂಗುಡೇಲು, ಬಾಲಕೃಷ್ಣ ಪೂಜಾರಿ ಪಲ್ಲತ್ತಡ್ಕ, ಭವಾನಿ ಬಾಲಕೃಷ್ಣ ಪೂಜಾರಿ ಪಲ್ಲತ್ತಡ್ಕ, ಹನ್ನತ್ ಕೆಯ್ಯೂರು, ಸುಜಯ ಗಂಗಾಧರ ಪೂಜಾರಿ, ಶೇಷಪ್ಪ ದೇರ್ಲ, ಜಗದೀಶ ಎಂಪಿ, ಗುರುರಾಜ್ ಕೆಯ್ಯೂರು, ಶತ್ತರ್ ಅರಿಕ್ಕಿಲ, ಹರಿನಾಥ ನಾಯ್ಕ , ನಾರಾಯಣ ಪೂಜಾರಿ, ಕೊರಗಪ್ಪ ಪೂಜಾರಿ.ಇವರು ಶ್ರೀ ಕ್ಷೇತ್ರ ಕೆಯ್ಯೂರು ವ್ಯವಸ್ಥಾಪನ ಸಮಿತಿ ಸದಸ್ಯರಾದ ಉಮಾಕಾಂತ್ ಬೈಲಾಡಿ , ಹೇಮಲತಾ,ಯು.ಬಿ. ದಂಪತಿಗಳ ಪುತ್ರಿ.