ಅಧ್ಯಕ್ಷರಾಗಿ ರಮೇಶ್ ಅಂಚನ್, ಕಾರ್ಯದರ್ಶಿಯಾಗಿ ಹಬೀಬ್ ಕುರಿಯ ಆಯ್ಕೆ
ಪುತ್ತೂರು: ಆಟೋ ಚಾಲಕರ ಸಂಘ ಕುರಿಯ ಇದರ ಗೌರಧ್ಯಕ್ಷರಾಗಿ ಬೂಡಿಯಾರ್ ಪುರುಷೋತ್ತಮ ರೈ ಹಾಗೂ ಅಧ್ಯಕ್ಷರಾಗಿ ರಮೇಶ್ ಅಂಚನ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜಬ್ಬಾರ್ ಕುರಿಯ, ಕಾರ್ಯದರ್ಶಿಯಾಗಿ ಹಬೀಬ್ ಕುರಿಯ, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ಲ ಕುರಿಯ, ಕೋಶಾಧಿಕಾರಿಯಾಗಿ ಇಲ್ಯಾಸ್ ಪಾಷಾ ಆಯ್ಕೆಯಾದರು. ಸಲಹೆಗಾರರಾಗಿ ಮಮ್ಮ ಅಜ್ಜಿಕಟ್ಟೆ ಹಾಗೂ ಇಸಾಕ್ ಕುರಿಯರವರನ್ನು ಆಯ್ಕೆ ಮಾಡಲಾಯಿತು.
ಹುಸೈನಾರ್ ಅಜ್ಜಿಕಟ್ಟೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಮೇಶ್ ವಾರ್ಷಿಕ ವರದಿ ಮಂಡಿಸಿದರು. ನಿಝಾರ್ ಅಜ್ಜಿಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಅಂಚನ್ ವಂದಿಸಿದರು.