ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಯುವಜನ ಪರಿಷತ್ ಪ್ರಶ್ನೆ
ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆಗೆ ಯತ್ನ ಪ್ರಕರಣವನ್ನು ನಾವು ಖಂಡಿಸುತ್ತೇವೆ. ಆದರೆ ಆರೋಪಿ ಒಬ್ಬ ಮುಸ್ಲಿಂ ಎಂದಾಗ ಮಾತ್ರ ಭಾರೀ ದೊಡ್ಡ ಪ್ರತಿಭಟನೆ ನಡೆಸುವುದರ ಉದ್ದೇಶವೇನು ಎಂದು ಮುಸ್ಲಿಂ ಯುವಜನ ಪರಿಷತ್ನ ಅಧ್ಯಕ್ಷ ಅಶ್ರಫ್ ಕಲ್ಲೇಗ ಅವರು ಪತ್ರಿಕಾಗೋಷ್ಠಿ ನಡೆಸಿ ಪ್ರಶ್ನೆ ಮಾಡಿದರಲ್ಲದೆ, ಮುಸಲ್ಮಾನರನ್ನು ಭಯೋತ್ಪಾದನೆ ಮಾದರಿಯಲ್ಲಿ ಸೃಷ್ಠಿಸುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದರು.
ಹಲವು ಸಮಯಗಳ ಹಿಂದೆ ಇದೇ ಸರಕಾರಿ ಆಸ್ಪತ್ರೆಯಲ್ಲಿ ಅರ್ಚನಾ ಕರ್ಕೆರ ಎಂಬವರು ಮಕ್ಕಳ ತಜ್ಞೆಯಾಗಿದ್ದರು. ಅವರ ಮೇಲೂ ಆಗಿನ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಅವರು ನಿಂದಿಸಿದಾಗ ಯಾವ ಐಎಮ್ಎಯು, ಸಂಘಟನೆಯೂ ವಿರೋಧಿಸಿಲ್ಲ. ಡಾ. ಅನಿಲ್ ಅವರ ವಿರುದ್ಧ ನಡೆದ ಘಟನೆಗೂ ಯಾವ ಸಂಘಟನೆ ಮಾತನಾಡಿಲ್ಲ. ಈಗ ಆರೋಪಿ ಒಬ್ಬ ಮುಸ್ಲಿಂ ಎಂದಾಗ ಭಾರೀ ದೊಡ್ಡ ಪ್ರತಿಭಟನೆ ನಡೆಸುವ ಉದ್ದೇಶವೇನು?. ಆರ್ಎಸ್ಎಸ್ ಹಿನ್ನೆಲೆಯುಳ್ಳ ವೈದ್ಯರ ಪತ್ನಿ ವೈದ್ಯಾಧಿಕಾರಿಯಾಗಿದ್ದಾರೆ. ಸುಮಾರು ವರ್ಷದಿಂದ ಅವರು ಇಲ್ಲಿದ್ದಾರೆ. ಅವರನ್ನು ವರ್ಗಾವಣೆ ಮಾಡಿಸಿ ಎಂದು ಆಗ್ರಹಿಸಿದರು.
ಐಎಂಎ ಗೂ ಪುತ್ತಿಲಗೂ ಏನು ಸಂಬಂಧ:
ಘಟನೆಯ ಸಂದರ್ಭ ಪೊಲೀಸರು ಬಂದು ಮಾತುಕತೆ ಮಾಡಿ ವ್ಯಕ್ತಿಯ ಮೊಬೈಲ್ನಲ್ಲಿದ್ದ ವಿಡಿಯೋ ಡಿಲಿಟ್ ಮಾಡಿಸಿದ್ದಾರೆ. ಸಂಜೆ 6 ಗಂಟೆಗೆ ಐಎಂಎ ಮತ್ತು ಅರುಣ್ ಕುಮಾರ್ ಪುತ್ತಿಲ, ಪರಿವಾರ ಸಂಘಟನೆ ಮಾನಭಂಗ ಯತ್ನ ದೂರು ನೀಡಿದ್ದಾರೆ. ಬೆಳಗ್ಗೆ 8 ಗಂಟೆಯೊಳಗೆ ಬಂದಿಸುವಂತೆ ಧಮ್ಕಿ ಹಾಕಿದ್ದಾರೆ. ಆದರೆ ಇಲ್ಲಿ ಐಎಂಎ ಜೊತೆ ಡಾಕ್ಟರ್ ಪಾರ್ಮ್ಗೂ ಪುತ್ತಿಲ ಪರಿವಾರಕ್ಕೂ ಸಂಬಂಧವೇನು ಎಂದು ಪ್ರಶ್ನಿಸಿದರಲ್ಲದೆ ಪುತ್ತಿಲರ ವಿರುದ್ದ ಅನೇಕ ಕೇಸ್ ಇದೆ. ಅವರನ್ನು ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ಎದುರು ಕೂತುಕೊಳಿಸಿದ್ದೇ ತಪ್ಪು. ಅವರು ಪೊಲೀಸ್ ಇಲಾಖೆಗೆ ಅವಾಜ್ ಹಾಕುತ್ತಿದ್ದಾರೆ ಎಂದಾದರೆ ಪೊಲೀಸ್ ಇಲಾಖೆ ಯಾವ ಮಟ್ಟಿಗೆ ತಲುಪಿದೆ ಎಂದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ .ಆಶಾ ಪುತ್ತೂರಾಯ ಅವರಿಗೆ ತೊಂದರೆ ಆಗಿದ್ದರೆ ಅದಕೆ ಸಂಬಂಧಿಸಿ ಅಧಿಕಾರಿಗಳಿದ್ದಾರೆ ಅಥವಾ ಆಸ್ಪತ್ರೆಯ ರಕ್ಷಾ ಸಮಿತಿ ಇದೆ. ಅವರ ಗಮನಕ್ಕೆ ತರಬೇಕಾಗಿತ್ತು. ಶಾಸಕರಿಗೆ ಈ ವಿಚಾರ ಗೊತ್ತೇ ಇಲ್ಲ. ಆದರೆ ಏಕೈಕ ಹಿಂದೂ ಸಂಘಟನೆಗೆ ಮಾತ್ರ ಗೊತ್ತಾಗಿದೆ. ಇದರ ಉದ್ದೇಶವೇನು? ಈ ಕುರಿತು ನಾವು ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಅಶ್ರಫ್ ಕಲ್ಲೇಗ ಹೇಳಿದರು.
ಮುಖ್ಯರಸ್ತೆ ತಡೆ ಮಾಡಿದಕ್ಕೆ ಯಾವ ಕೇಸ್ ಕಾದು ನೋಡಬೇಕು
ವಕ್ಫ್ ವಿಚಾರದಲ್ಲಿ ಪ್ರತಿಭಟನೆ ವೇಳೆ ರಸ್ತೆ ತಡೆ ಮಾಡಿದ್ದೀರೆಂದು ಸುಮೊಟೊ ಕೇಸ್ ದಾಖಲಿಸಲಾಗಿತ್ತು. ಇವತ್ತು ಪೊಲೀಸ್ ಠಾಣೆಯ ಬಳಿಯೇ ಮುಖ್ಯರಸ್ತೆ ತಡೆ ಮಾಡಲಾಗಿದೆ. ಈಗ ಪೊಲೀಸರು ಯಾವ ಕೇಸ್ ದಾಖಲಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ ಎಂದು ಮಸ್ಲಿಂ ಯುವಜನ ಪರಿಷತ್ನ ಕೋಶಾಧಿಕಾರಿ ಅಶ್ರಫ್ ಬಾವು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಬಶೀರ್ ಪರ್ಲಡ್ಕ ಉಪಸ್ಥಿತರಿದ್ದರು.
ಅಶೋಕ್ ರೈ, ಅರುಣ್ ಕುಮಾರ್ ಪುತ್ತಿಲರಿಗೆ ಜನ ನಾಯಕನಾಗುವ ಪೈಪೋಟಿ:
ಅರುಣ್ ಕುಮಾರ್ ಪುತ್ತಿಲರನ್ನು ಬಿಜೆಪಿಯವರು ಈಗ ದೂರ ಮಾಡುತ್ತಿದ್ದಾರೆ. ಹಾಗಾಗಿ ನಾಳಿನ ಚುನಾವಣೆಗೆ ಬ್ಯಾರಿಗಳನ್ನು ಬೈದು ಲಾಭ ಪಡೆಯುವ ಚಿಂತನೆ ಅರುಣ್ ಕುಮಾರ್ ಪುತ್ತಿಲರದ್ದು, ಅದರೆ ಹಾಗೆ ಬೈದರೆ ಬ್ಯಾರಿಗಳು ಒಗ್ಗಟ್ಟಾಗುತ್ತಾರೆ ಎಂಬುದನ್ನು ಅವರು ತಲೆ ಖರ್ಚು ಮಾಡಬೆಕು ಎಂದು ಮುಸ್ಲಿಂ ಯುವಜನ ಪರಿಷತ್ನ ಅಶ್ರಫ್ ಕಲ್ಲೇಗ ಹೇಳಿದರು. ಈ ಸಂದರ್ಭ ಮಸ್ಲಿಂ ಯುವಜನ ಪರಿಷತ್ನ ಮಾಜಿ ಅಧ್ಯಕ್ಷ ಹಮೀದ್ ಸಾಲ್ಮರ ಅವರು ಮಾತನಾಡಿ, ಒಂದು ರೀತಿಯಲ್ಲಿ ಅಶೋಕ್ ರೈ ಮತ್ತು ಅರುಣ್ ಕುಮಾರ್ ಪುತ್ತಿಲ ಅವರಿಗೆ ಜನನಾಯಕ ಆಗುವ ಪೈಪೋಟಿ ನಡೆಯುತ್ತಿದೆ ಎಂದರು.