ಪುತ್ತೂರು: ದ.ಕ ಜಿಲ್ಲೆಯ ಪುತ್ತೂರಿನಲ್ಲಿ ಉದ್ಯೋಗ ವೃತ್ತಿ ಶಿಕ್ಷಣ ನೀಡುವ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಕ್ಷಯ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಪಾಲಿಗೆ ವರವಾಗಿರುವ ಈ ವಿದ್ಯಾಸಂಸ್ಥೆ ಕಲಿಕಾ ಗುಣಮಟ್ಟ, ಫಲಿತಾಂಶ, ಪಠ್ಯೇತರ ಚಟುವಟಿಕೆಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮೆರೆದಿದೆ.
ಉದ್ಯೋಗ ಆಧಾರಿತ ಕೋರ್ಸುಗಳು:
ಅಕ್ಷಯ ಕಾಲೇಜಿನಲ್ಲಿ ಬಿ.ಕಾಂ ವಿತ್ ಏವಿಯೇಶನ್ & ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್, ಬಿಎಸ್ಸಿ ಫ್ಯಾಶನ್ ಡಿಸೈನ್, ಇಂಟೀರಿಯರ್ ಡಿಸೈನ್ ಆಂಡ್ ಡೆಕೋರೇಶನ್, ಬಿಸಿಎ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ & ಸೈಬರ್ ಸೆಕ್ಯೂರಿಟಿ, ಬಿಬಿಎಯ ಸಪ್ಲೈ ಚೈನ್ & ಲಾಜಿಸ್ಟಿಕ್ ಮ್ಯಾನೇಜ್ಮೆಂಟ್, ಬಿಎಚ್ಎಸ್ ಬ್ಯಾಚುಲರ್ ಇನ್ ಹಾಸ್ಪಿಟಾಲಿಟಿ ಸೈನ್ಸ್(ಹೊಟೇಲ್ ಮ್ಯಾನೇಜ್ಮೆಂಟ್), ಬಿ.ಎ ವಿಥ್ ಫ್ಯಾಶನ್ ಡಿಸೈನ್, ಮೇಕಪ್ & ಹೇರ್ಸ್ಟೈಲ್, ಏವಿಯೇಶನ್ ಪದವಿಗಳನ್ನಿಲ್ಲಿ ಹಲವು ಸರ್ಟಿಫಿಕೇಟ್ ಕೋರ್ಸುಗಳೊಂದಿಗೆ ಪಡೆಯಬಹುದಾಗಿದೆ.
ವಿಪುಲ ಉದ್ಯೋಗಾವಕಾಶ:
ಮಂಗಳೂರು ವಿ.ವಿ ಸಂಯೋಜನೆ ಹೊಂದಿರುವ ಸಂಸ್ಥೆಯಿಂದ ಫ್ಯಾಶನ್ ಡಿಸೈನ್ ಪದವಿಯಿಂದ ಖಚಿತ ಉದ್ಯೋಗದ ಭರವಸೆಯಿದೆ. ಮಾಡೆಲಿಂಗ್, ಸಿನಿಮಾರಂಗ, ವಸ್ತ್ರವಿನ್ಯಾಸ, ರೀಟೇಲ್ ಬಯರ್, ರಿಟೇಲ್ ಮ್ಯಾನೇಜರ್, ಮರ್ಚಂಡೈಸರ್ಗಳಿಗೆ ದೇಶ ವಿದೇಶಗಳ ಕಂಪೆನಿಗಳಲ್ಲಿ ತಿಂಗಳಿಗೆ ಲಕ್ಷಕ್ಕಿಂತಲೂ ಅಧಿಕ ಸಂಬಳ ಸಿಗುತ್ತದೆ. ಪ್ರಸ್ತುತ ಇಂಟೀರಿಯರ್ ಡಿಸೈನ್ ಔದ್ಯೋಗಿಕ ರಂಗದಲ್ಲಿ ತನ್ನದೇ ಛಾಪು ಮೂಡಿಸುತ್ತಿದ್ದು, ವಿದ್ಯಾರ್ಥಿಗಳು ಹೊಸ ವೃತ್ತಿ ಜೀವನದ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಳಾಂಗಣ ವಿನ್ಯಾಸಗಾರರಿಗೆ ವಿಫುಲವಾದ ಬೇಡಿಕೆ ಇದ್ದು, ವಾಸ್ತುಶಿಲ್ಪ ಸಂಸ್ಥೆಗಳು, ಪೀಠೋಪಕರಣ ಕಂಪೆನಿಗಳು, ನಿರ್ಮಾಣ ಸಂಸ್ಥೆಗಳು, ಹೋಟೆಲ್, ರೆಸಾರ್ಟ್, ಕಾರ್ಪೋರೇಟ್ ವಲಯ, ಸ್ವಯಂ ಉದ್ಯೋಗ ಹೀಗೆ ಬಹುತೇಕ ಎಲ್ಲ ಕ್ಷೇತ್ರ ಮತ್ತು ಉದ್ಯೋಗ ಕ್ಷೇತ್ರಗಳಿಗೆ ಪ್ರತಿಭಾನ್ವಿತ ಇಂಟೀರಿಯರ್ ಡಿಸೈನರ್ಗಳ ಬೇಡಿಕೆ ಇದ್ದು ಟ್ರೆಂಡ್ ಸೃಷ್ಟಿಸಿದೆ.
ಬಿ.ಕಾಂ ವಿತ್ ಎವಿಯೇಶನ್ & ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಪದವಿ ಗಳಿಸಿದಲ್ಲಿ ಏರ್ಪೋರ್ಟ್ ಗ್ರೌಡ್ ಲೆವೆಲ್ ಸ್ಟಾಫ್, ಕ್ರೂಝ್ ಮೆಂಬರ್ ಮೊದಲಾದ ಹುದ್ದೆಗಳನ್ನು ಪಡೆಯಬಹುದು. ಹಾಸ್ಪಿಟಾಲಿಟಿ ಮ್ಯಾನೇಜ್ಮೇಂಟ್ ಮೂಲಕ 3 ಸ್ಟಾರ್, 5 ಸ್ಟಾರ್ ಹೋಟೆಲ್ಗಳಲ್ಲಿ ಉತ್ತಮ ಉದ್ಯೋಗ ಪಡೆಯಬಹುದಾಗಿದೆ. ಬಿಎಸ್ಸಿ ಹಾಸ್ಪಿಟಾಲಿಟಿ ಸಯನ್ಸ್(ಹೊಟೇಲ್ ಮ್ಯಾನೇಜ್ಮೆಂಟ್) ಪದವಿಯಿಂದ ಕ್ಯಾಬಿನ್ ಕ್ರೂ, ಏರ್ಲೈನ್ಸ್, ಟೂರಿಸಂ, 5 ಸ್ಟಾರ್ & 7 ಸ್ಟಾರ್ ಹೋಟೇಲ್ ಉದ್ಯಮಗಳಲ್ಲಿ ಹಾಗೂ ವಿದೇಶದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಫೀಲ್ಡ್ ಮ್ಯಾನೇಜರ್ ಮೊದಲಾದ ಉನ್ನತ ಉದ್ಯೋಗಗಳನ್ನು ಗಳಿಸಬಹುದಾಗಿದೆ. ಬಿಸಿಎ ವಿತ್ ಆರ್ಟಿಫಿಷಲ್ ಇಂಟೆಲಿಜೆನ್ಸಿ ಮೂಲಕ ವಿದ್ಯಾರ್ಥಿಗಳು ಸಾಪ್ಟ್ವೇರ್ ಕಂಪನಿ ಮಾರ್ಕೆಟಿಂಗ್ ಇ ಕಾಮರ್ಸ್ ಸಾಪ್ಟ್ವೇರ್ ಡೆವಲಪರ್ ಮುಂತಾದ ಉದ್ಯೋಗಗಳನ್ನು ಹೊಂದಬಹುದು. ಹಾಗೆಯೇ ವಿಶೇಷವಾಗಿ ಬಿ.ಎ ಪದವಿಯೊಂದಿಗೆ ವಿದ್ಯಾರ್ಥಿಗಳಿಗೆ ಎವೀಯೇಶನ್, ಫ್ಯಾಶನ್ ಡಿಸೈನ್ ಮತ್ತು ಮೇಕಪ್ & ಹೆರ್ಸ್ಟೈಲ್ ಸರ್ಟಿಫಿಕೇಟ್ ಕೋರ್ಸ್ಗಳನ್ನು ಕಲಿಯುವ ಉತ್ತಮ ಅವಕಾಶವನ್ನು ಸಂಸ್ಥೆ ಒದಗಿಸಿದೆ.
ಉತ್ತಮ ಕ್ಯಾಂಪಸ್ ವಿಶೇಷತೆ:
ಅಕ್ಷಯ ಕಾಲೇಜಿನಲ್ಲಿ ವಿಶಾಲವಾದ ಕೊಠಡಿ, ಉತ್ತಮ ಕ್ಯಾಂಪಸ್ ಅಕ್ಷಯ ಸಂಸ್ಥೆಯ ವಿಶೇಷತೆಗಳಲ್ಲೊಂದಾಗಿದೆ. ಹುಡುಗ/ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್, ಶಿಕ್ಷಣ ಸಾಲ ಸಹಾಯಕ, ರಾಷ್ಟ್ರ ಮಟ್ಟದ ಸ್ಕಾಲರ್ಶಿಪ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಪ್ಲೇಸ್ಮೆಂಟ್ ಸೆಲ್ ಮತ್ತು ಕ್ಯಾಂಪಸ್ ಇಂಟರ್ವ್ಯೂ, ಅನುಭವಿ ನುರಿತ ಉಪನ್ಯಾಸಕ ವೃಂದ, ಗ್ರಂಥಾಲಯ ಹಾಗೂ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ಇಂಗ್ಲೀಷ್ ತರಗತಿಗಳು, ಸೆಮಿನಾರ್ಸ್ ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಮುಂತಾದ ಸೌಲಭ್ಯ ಹೊಂದಿದೆ.
ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ:
ಕೋಸ್ಟಲ್ ಕ್ವೀನ್, ಮಿಸ್ಟರ್ ಕರ್ನಾಟಕ ಸಾಧನೆಯನ್ನು ವಿದ್ಯಾರ್ಥಿಗಳು ಮಾಡಿದ್ದಲ್ಲದೇ, ಅಂತರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ 5 ವಿದ್ಯಾರ್ಥಿಗಳು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ರಾಷ್ಟ್ರ, ರಾಜ್ಯ ಹಾಗೂ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಹಲವು ಸಾಂಸ್ಕೃತಿಕ ಮತ್ತು ಸಾಹಿತಿಕ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದು, ಎನ್.ಎಸ್.ಎಸ್, ಸೋರ್ಟ್ಸ್, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಪಿಯು ವಿದ್ಯಾರ್ಥಿಗಳ ಕೌಶಲ್ಯತೆಯನ್ನು ಹೆಚ್ಚಿಸಲು “ಅಟೆರ್ನಸ್” ಮತ್ತು ವಿ.ವಿ ಮಟ್ಟದ ಪದವಿ ವಿದ್ಯಾರ್ಥಿಗಳಿಗೆ “ಕೃತ್ವ” ಸ್ಪರ್ಧೆಗಳನ್ನು ಹಾಗೂ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆಗೆ ಒಣಂ ಆಚರಣೆ, ಆಟಿದ ಕೂಟ ಆಚರಣೆ, ಅಕ್ಷಯ ವೈಭವದಂತಹ ಕಾರ್ಯಕ್ರಮಗಳು ಇಲ್ಲಿನ ವಿಶೇಷತೆಯಾಗಿದೆ.
ಹೆಚ್ಚಿಮ ಮಾಹಿತಿಗೆ 9141160704(ಪ್ರಾಂಶುಪಾಲರು), 8088381678(ಆಡಳಿತಾಧಿಕಾರಿ),08251-200030, 8050108510(ಕಛೇರಿ), WWW.akshayacollegeputtur.com, http://WWW.akshayacollegeputtur.com ಸಂಪರ್ಕಿಸಬಹುದಾಗಿದೆ.
ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಶೈಕ್ಷಣಿಕ ಸಾಲ ಸೌಲಭ್ಯಕ್ಕೆ ನೆರವು ನೀಡಲಾಗುತ್ತಿದೆ. ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗೆ ಇಲ್ಲಿ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದ್ದು ವಿದ್ಯಾರ್ಥಿಗಳು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ವಿಶ್ವದಾಖಲೆ ಸಾಧನೆಯ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅನುಕೂಲತೆಗಾಗಿ ಅಕ್ಷಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದು ಸ್ವಾವಲಂಬಿಯಾಗಿ ಬದುಕಬಲ್ಲೆ ಎನ್ನುವ ವಾತಾವರಣ ಮೂಡಿಸುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.

ಚೇರ್ಮ್ಯಾನ್, ಅಕ್ಷಯ ಕಾಲೇಜು
ಹಲವು ರ್ಯಾಂಕ್ಗಳು..
2021-22ರಲ್ಲಿ ಬಿಎಸ್ಸಿ ಫ್ಯಾಷನ್ ಡಿಸೈನ್ನಲ್ಲಿ ಸ್ವರ್ಣ ಜ್ಯೋತ್ಸ್ನಾರವರಿಗೆ ಪ್ರಥಮ, ಜಶ್ಮಿತಾರವರಿಗೆ ದ್ವಿತೀಯ ರ್ಯಾಂಕ್, 2022-23ರಲ್ಲಿ ಬಿಎಸ್ಸಿ ಫ್ಯಾಷನ್ ಡಿಸೈನ್ನಲ್ಲಿ ಪ್ರಣಮ್ಯ ಸಿ.ರವರಿಗೆ ಪ್ರಥಮ ರ್ಯಾಂಕ್, 2023-24ರಲ್ಲಿ ಜೀವಿತಾ ಎಸ್.ಕೆರವರಿಗೆ ಪ್ರಥಮ, ರಿಯಾ ಪೊನ್ನಮ್ಮ ಡಿ.ಕೆರವರಿಗೆ ದ್ವಿತೀಯ ರ್ಯಾಂಕ್ ಸಂಸ್ಥೆಗೆ ಲಭಿಸಿರುತ್ತದೆ.
ಉದ್ಯೋಗದಲ್ಲಿ..
ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಾದ ವಿದ್ಯಾಶ್ರೀ ಹಾಗೂ ಭವ್ಯಶ್ರೀರವರು ಮೈಸೂರು ಕೂರ್ಗಳ್ಳಿ ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿ. ಯುನಿಟ್ 37 ಇಲ್ಲಿ ಐಇ ಅಸಿಸ್ಟೆಂಟ್ ಆಗಿ, ಲಿಖಿತ್ ಎ.ವಿರವರು ಪ್ರೊಪ್ರೈಟರ್ ಆಫ್ ಕಾರ್ನಿಕಾ ಇಂಟೀರಿಯರ್ನಲ್ಲಿ ಇಂಟೀರಿಯರ್ ಡಿಸೈನರ್ ಆಗಿ, ಗಗನ್ದೀಪ್ ಎ.ಬಿರವರು ಬೆಂಗಳೂರು ಜಿಗಾನಿ ಎಂವಿ ಡಿಸೈನ್ಸ್ ಆಂಡ್ ಫಾಸ್ಟನರ್ಸ್ನಲ್ಲಿ ಇಂಟೀರಿಯರ್ ಡಿಸೈನರ್ ಆಗಿ, ಪ್ರತೀಕ್ಷಾ ಆರ್.ರೈರವರು ಮೈಸೂರು ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ನಲ್ಲಿ ಕ್ವಾಲಿಟಿ ಕಂಟ್ರೋಲರ್ ಆಗಿ, ಸಾಕ್ಷಿ, ಹಂಸಿಣಿ, ಕೃತಿರವರು ಬೆಂಗಳೂರು ಏರ್ಪೋರ್ಟ್ ಟರ್ಮಿನಲ್-2ನಲ್ಲಿ, ಮಿಥುನ್ರವರು ಬೆಂಗಳೂರು ಪೋರ್ಟರ್ ಲಾಜಿಸ್ಟಿಕ್ನಲ್ಲಿ ಉದ್ಯೋಗದಲ್ಲಿದ್ದಾರೆ.
ಅಕ್ಷಯ ಪಿಯು ಕಾಲೇಜು ಆರಂಭ..
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಅಕ್ಷಯ ಕಾಲೇಜು ಅಕ್ಷಯ ಪದವಿ ಪೂರ್ವ ಕಾಲೇಜು ಅನ್ನು ಆರಂಭಿಸುತ್ತಿದೆ. ಕಾಮರ್ಸ್(ವಾಣಿಜ್ಯ) ಹಾಗೂ ಸೈನ್ಸ್(ವಿಜ್ಞಾನ) ತರಗತಿಗಳನ್ನು ಆರಂಭಿಸಲಾಗುತ್ತಿದ್ದು ಪಿಯುಸಿ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳೊಂದು ಸುವರ್ಣಾವಕಾಶವಾಗಿದೆ. ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಪೂರ್ಣ ಸ್ಕಾಲರ್ ಶಿಪ್ ಸಂಸ್ಥೆ ಒದಗಿಸುತ್ತದೆ. ನುರಿತ ತಂಡದೊಂದಿಗೆ ಕಾಮರ್ಸ್ ಜೊತೆ ಸಿ.ಎ ಕೋರ್ಸ್ ಹಾಗೂ ಸೈಯನ್ಸ್ ಜೊತೆಗೆ ಸಿ.ಇ.ಟಿ, ನೀಟ್, ಜೆ.ಇ.ಇ ತರಬೇತಿ ನೀಡಲಾಗುತ್ತದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.