ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ʼಪಾರ್ಥ ಸಾರಥ್ಯʼ ತಾಳಮದ್ದಳೆ

0

ಪುತ್ತೂರು: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ನಾಗರಾಜ ಪಂಜತ್ತಡ್ಕ ಕಾವು ಹಾಗೂ ಮನೆಯವರ ವತಿಯಿಂದ ವಿಶೇಷ ಯಕ್ಷಗಾನ ತಾಳಮದ್ದಳೆ ʼಪಾರ್ಥ ಸಾರಥ್ಯʼ ಎ.26ರಂದು ನಡೆಯಿತು.

ಕಲಾಸಂಘದ ಅಧ್ಯಕ್ಷ, ಹಿರಿಯ ಸಾಹಿತಿ ಅರ್ಥಧಾರಿ ಡಾ. ರಮಾನಂದ ಬನಾರಿ ಅವರ ಮಾರ್ಗದರ್ಶನದಲ್ಲಿ , ಭಾಗವತ ಗುರು ವಿಶ್ವವಿನೋದ ಬನಾರಿ ಅವರ ಸಂಯೋಜನೆಯೊಂದಿಗೆ ಯಕ್ಷಗಾನ ತಾಳಮದ್ದಳೆ ನಡೆಯಿತು.

ಕಾರ್ಯಕ್ರಮದ ಮೊದಲಿಗೆ ಸ್ಥಳ ಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ದೇವರಿಗೆ ಪೂಜಾರ್ಚನೆ ಸಲ್ಲಿಸಲಾಯಿತು.


ಭಾಗವತಿಕೆಯಲ್ಲಿ ಮೋಹನ ಮೆಣಸಿನಕಾನ , ವಿದ್ಯಾಶ್ರೀ ಆಚಾರ್ಯ ಈಶ್ವರ ಮಂಗಲ, ಚೆಂಡೆಮದ್ದಳೆ ವಾದಕರಾಗಿ ಶ್ರೀಧರ ಆಚಾರ್ಯ ಈಶ್ವರ ಮಂಗಲ , ಮಂಡೆಕೂಲು ಅಪ್ಪಯ್ಯ ಮಣಿಯಾಣಿ, ವಿಷ್ಣು ಶರಣ ಬನಾರಿ, ಕೃಷ್ಣ ಪ್ರಸಾದ ಬೆಳ್ಳಿಪ್ಪಾಡಿ ಸದಾನಂದ ಮಯ್ಯಾಳ ಅವರು ಸಹಕರಿಸಿದರು. ಅರ್ಥಗಾರಿಕೆಯಲ್ಲಿ ರಾಮಣ್ಣ ಮಾಸ್ತರ್‌ ದೇಲಂಪಾಡಿ, ಐತಪ್ಪ ಗೌಡ ಮುದಿಯಾರು , ವೀರಪ್ಪ ಸುವರ್ಣ ಬೆಳ್ಳಿಪ್ಪಾಡಿ, ಶಾಂತಕುಮಾರಿ ದೇಲಂಪಾಡಿ, ಶ್ರೀನಿಧಿ ಮಯ್ಯಾಳ, ಮಾಷ್ಟರ್‌ ಶ್ರೀದೇವ್‌ ಈಶ್ವರ ಮಂಗಲ ಅವರು ತಮ್ಮ ಕಲಾ ಪ್ರೌಡಿಮೆಯನ್ನು ತೋರಿಸಿಕೊಟ್ಟರು.
ಪೂಜಾ ಸಿ. ಎಚ್‌ ಅವರು ಸ್ವಾಗತಿಸಿ, ಪಾತ್ರ ಪರಿಚಯಿಸಿದರು. ನಂದ ಕಿಶೋರ ಬನಾರಿ ವಂದಿಸಿದರು.

LEAVE A REPLY

Please enter your comment!
Please enter your name here