ಮರ್ದಾಳ: ಎಸ್.ಕೆ.ಎಸ್.ಎಸ್. ಎಫ್. ವತಿಯಿಂದ ಮಜ್ಲಿಸುನ್ನೂರು ವಾರ್ಷಿಕ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ

0

ಕಡಬ: ಎಸ್ .ಕೆ. ಎಸ್.ಎಸ್. ಎಫ್. ಮರ್ಧಾಳ ಶಾಖೆ ವತಿಯಿಂದ ಮಜ್ಲಿಸುನ್ನೂರ್ ವಾರ್ಷಿಕ ಮತ್ತು ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಕಾರ್ಯಕ್ರಮ ಮರ್ದಾಳ ಶಂಸುಲ್ ಉಲಮಾ ವೇದಿಕೆಯಲ್ಲಿ ಶಾಖೆಯ ಕಛೇರಿ ವಠಾರದಲ್ಲಿ ನಡೆಯಿತು.

ಶಾಖೆಯ ಅಧ್ಯಕ್ಷ ಪಿ .ಎಂ ಯಹ್ಯಾ ಮದನಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಮಗ್ರಿಬ್ ನಮಾಝಿನ ಬಳಿಕ ನಡೆದ ಮಜ್ಲಿಸುನ್ನೂರಿಗೆ ಕಡಬ ಟೌನ್ ಮಸೀದಿ ಖತೀಬರಾದ ಇಬ್ರಾಹಿಂ ದಾರಿಮಿ ನೇತ್ರತ್ವ ನೀಡಿದರು. ಮರಕ್ಕಿನಿ ಖತೀಬ್ ಸಿದ್ದೀಕ್ ದಾರಿಮಿ ಸಮಾರಂಭವನ್ನು ಉದ್ಘಾಟಿಸಿದರು. ಅಬೂಬಕರ್ ಸಿದ್ದೀಕ್ ಅಝ್ಹರಿ ಪಯ್ಯನ್ನೂರು ಮುಖ್ಯ ಪ್ರಭಾಷಣ ಮಾಡಿದರು ಸ್ವಾಗತ ಸಮಿತಿ ಅಧ್ಯಕ್ಷ ಶಂಸುದ್ದೀನ್ ಹನೀಫಿ ಸ್ವಾಗತಿಸಿ ಶಾಖೆಯ ಕಾರ್ಯದರ್ಶಿ ರಾಝಿ ಬಾಖವಿ ವಂದಿಸಿದರು ಪಿ.ಎ ಅಸ್ಲಮಿ ಮರ್ಧಾಳ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here