ಪುತ್ತೂರು: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಪುತ್ತೂರು ರಬ್ಬರ್ ವಿಭಾಗದ ಕಛೇರಿ ಅಧೀಕ್ಷಕ ಕೃಷ್ಣಪ್ಪ ಗೌಡರವರು ಎ.30ರಂದು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದಾರೆ.
ಚಾರ್ವಾಕ ಗ್ರಾಮದ ಅಂತ್ರ ನಿವಾಸಿಯಾದ ಕೃಷ್ಣಪ್ಪ ಗೌಡರವರು 1987ರಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆಗೆ ಸೇರಿದ್ದರು. ಬಳಿಕ ಪ್ರಥಮ ದರ್ಜೆ ಸಹಾಯಕರಾಗಿ ಭಡ್ತಿಹೊಂದಿ ರಬ್ಬರ್ ವಿಭಾಗಗಳಲ್ಲಿ /ಘಟಕಗಳಲ್ಲಿ ವಿವಿಧ ಕಡೆ ಕರ್ತವ್ಯ ನಿರ್ವಹಿಸಿದ್ದರು. ನಂತರ ಅಧೀಕ್ಷಕರಾಗಿ ಭಡ್ತಿ ಹೊಂದಿ ಸುಳ್ಯ ಮತ್ತು ಪುತ್ತೂರು ವಿಭಾಗದಲ್ಲಿ ಕಛೇರಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಸುಧೀರ್ಘ 38 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿದ್ದಾರೆ. ಇವರು ಪತ್ನಿ ಗೃಹಿಣಿಯಾಗಿರುವ ಆರತಿ, ಪುತ್ರಿ ಎಂ.ಎಸ್ಸಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಕೃತಿ ಎ.ಕೆ., ಪುತ್ರ ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ ಶಮ್ಮಿತ್ ಎ.ಕೆ.,ರವರೊಂದಿಗೆ ವಾಸವಾಗಿದ್ದಾರೆ.