ಅರಿಯಡ್ಕ: ಏ.27ರಂದು ಗಾಳಿ, ಸಿಡಿಲು ಮಳೆಯ ಆರ್ಭಟಕ್ಕೆ ಹಾನಿಯುಂಟಾದ ಘಟನೆ ಅರಿಯಡ್ಕ ಗ್ರಾಮದ ಕುತ್ಯಾಡಿ ಹೊಸ ಗದ್ದೆ ಪರಿಸರದಲ್ಲಿ ನಡೆದಿದೆ.

ಸ್ಥಳೀಯ ಹರಿಶ್ಚಂದ್ರ ಆಚಾರ್ಯ,ಯಾದವ ಗೌಡ ಮತ್ತು ಶೀನಪ್ಪ ನಾಯ್ಕ ರವರ ಮನೆಯ ವಠಾರದಲ್ಲಿರುವ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡಿದೆ.ಇದರಿಂದ ಕೃಷಿ ಹಾನಿಗೊಂಡಿದೆ. ಸ್ಥಳೀಯರು ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕರಿಸಿದರು.
ಈ ಸಂದರ್ಭದಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ , ಜಗದೀಶ್ ನಾಯ್ಕ ಬೇಂಗತ್ತಡ್ಕ, ಸಂಜೀವ ನೆಕ್ಕರೆ, ಚಂದ್ರ ಪಾದೆಲಾಡಿ, ಚಿರಂಜೀವಿ ಪಾದೆಲಾಡಿ, ಶೇಷಪ್ಪ ನಾಯ್ಕ ಮಾಯಿಲ ಕೊಚ್ಚಿ, ನಾರಾಯಣ ನಾಯ್ಕ ಹೊಸ ಗದ್ದೆ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.