ಪೆರಾಬೆ: ಗ್ರಾ.ಪಂ.ನ ಅರಿವು ಕೇಂದ್ರದಲ್ಲಿ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಏ.28ರಂದು ನಡೆಯಿತು.
ಅತಿಥಿಯಾಗಿದ್ದ ವೈದ್ಯ ಡಾ.ಸುಬ್ರಹ್ಮಣ್ಯರವರು ಮಾತನಾಡಿ, ಶಿಬಿರದಲ್ಲಿ ಮಕ್ಕಳು ಉತ್ತಮ ರೀತಿಯ ತರಬೇತಿಯನ್ನು ಪಡೆದುಕೊಳ್ಳುವಂತೆ ಹಾಗೂ ತಮ್ಮ ಜೀವನದ ಮೌಲ್ಯವನ್ನು ಕಾಪಾಡುವಂತಹ ಓದುವ, ಬರೆಯುವ ಸ್ಕಿಲ್ ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು. ಆಲಂಕಾರು ಜೆಸಿಐ ಅಧ್ಯಕ್ಷ ಗುರುರಾಜ್ ಕೇವಳ ಮಾತನಾಡಿ, ಪೆರಾಬೆ ಗ್ರಾ.ಪಂ.ಅರಿವು ಕೇಂದ್ರದ ಈ ಬೇಸಿಗೆ ಶಿಬಿರದಿಂದ ಮಕ್ಕಳು ಉತ್ತಮ ರೀತಿಯ ಶಿಸ್ತನ್ನು ಕಲಿತುಕೊಳ್ಳುವಂತೆ ಹೇಳಿದರು. ಗ್ರಂಥಾಲಯಕ್ಕೆ ಶಿಲೀಗ್ ಫ್ಯಾನ್ ಕೊಡುಗೆಯಾಗಿ ನೀಡುವುದಾಗಿ ಹೇಳಿದರು.
ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ., ಸದಸ್ಯೆ ಮಮತಾ ರೈ ಶುಭಹಾರೈಸಿದರು. ಪೆರಾಬೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಶಾಲಿನಿಯವರು ಶಿಬಿರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾ.ಪಂ.ಸದಸ್ಯರಾದ ಕುಮಾರ ಕೆ., ಮೋಹಿನಿ, ರಾಜು ಕೆ., ಮೋಹನ್ದಾಸ್ ರೈ, ಸುಶೀಲಾ, ಮೇನ್ಸಿ, ಫಯಾಝ ಉಪಸ್ಥಿತರಿದ್ದರು. ಪೆರಾಬೆ ಗ್ರಾ.ಪಂ.ಅರಿವು ಕೇಂದ್ರದ ಗ್ರಂಥಾಲಯ ಮೇಲ್ವಿಚಾರಕರಾದ ಜಯಕುಮಾರಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.