ಪುತ್ತೂರು: ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನಾಧಿಕಾರಿ ಬಾಲಕೃಷ್ಣ ಗೌಡ ಬಿ.ರವರು ಎ.30 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಆರ್ಯಾಪು ಗ್ರಾಮದ ಕುಂಜೂರುಪಂಜದ ಪಿಲಿಗುಂಡ ದಿ.ಕೇಪು ಗೌಡ ಹಾಗೂ ದಿ.ಜಾಕಮ್ಮರವರ ಪುತ್ರರಾದ ಬಾಲಕೃಷ್ಣ ಗೌಡರವರು 1989ರಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಹಾಯಕ ನಗರ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿ ಬಳಿಕ ಪದೋನ್ನತಿ ಹೊಂದಿ ನಗರ ಯೋಜನಾಧಿಕಾರಿಯಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಬಾಲಕೃಷ್ಣ ಗೌಡರವರು ಸಂತ ಫಿಲೋಮಿನಾ ಪ್ರೌಢಶಾಲೆ ಹಾಗೂ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರಿನಲ್ಲಿ ಡಿಪ್ಲೊಮಾ ಪದವಿ ಪಡೆದು ಮಹಾನಗರ ಪಾಲಿಕೆ ಮಂಗಳೂರು ಇಲ್ಲಿ ಸಹಾಯಕ ನಗರ ಯೋಜನಾಧಿಕಾರಿಯಾಗಿ ಸೇವೆಗೆ ಸೇರಿ ಬಳಿಕ ನಗರ ಯೋಜನಾಧಿಕಾರಿಯಾಗಿ ಪದೋನ್ನತಿ ಹೊಂದಿದ್ದರು.
ಪ್ರಸ್ತುತ ಬಾಲಕೃಷ್ಣ ಗೌಡರವರು ಮಂಗಳೂರು ಬಿಜೈ ಕಾಪಿಕಾಡ್ ನಿವಾಸಿಯಾಗಿದ್ದು ಪತ್ನಿ ಶ್ರೀಮತಿ ರೇಷ್ಮಾ ಇವರು ಮಂಗಳೂರು ಶ್ರೀನಿವಾಸ ಪಾಠಶಾಲೆಯ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಮಗ ಶಶಾಂಕ್ ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದು, ಮಗಳು ಸಾನ್ವಿ ವಳಚ್ಚಿಲ್ ಎಕ್ಸ್ ಪರ್ಟ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.