ಬಡಗನ್ನೂರು: ಸ್ವಾಮಿ ಕೊರಗಜ್ಜ ಕ್ಷೇತ್ರ ಶಬರಿ ನಗರ, ಸುಳ್ಯಪದವು ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಏ.27 ರಂದು ಶ್ರೀ ಕ್ಷೇತ್ರದ ವಠಾರದಲ್ಲಿ ನಡೆಯಿತು.
ಸಭೆಯಲ್ಲಿ 2024-25ನೇ ಸಾಲಿನ ಲೆಕ್ಕ ಪತ್ರ ಮಂಡಿಸಿ ಅನುಮೋದನೆ ಪಡೆಯಲಾಯಿತು. ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಬೆಳಿಯಪ್ಪ ಗೌಡ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಸ್ವಾಮಿ ಕೊರಗಜ್ಜ ಕ್ಷೇತ್ರಕ್ಕೆ ಹನ್ನೆರಡು ವರ್ಷ ತುಂಬಿ ಹದಿಮೂರನೇ ವರ್ಷಕ್ಕೆ ಪಾದರ್ಪಣೆ ಅಗುತ್ತಿದೆ. ಯಾವುದೇ ದೖೆವ ದೇವರ ಸಾನಿಧ್ಯ ಹನ್ನೆರಡು ವರ್ಷಕ್ಕೊಮ್ಮೆ ಬ್ರಹ್ಮಕಲಶ ಮಾಡಿಕೊಂಡು ಕ್ಷೇತ್ರ ವೖದ್ಧಿಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದ ಅಷ್ಟಮಂಗಳ ಚಿಂತನೆಮಾಡಿಕೊಂಡು ಆ ಮುಖಾಂತರ ಕ್ಷೇತ್ರದ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸಹಕಾರ ಅತೀ ಅಗತ್ಯ ಎಂದ ಅವರು ಕಳೆದ ಹನ್ನೆರಡು ವರುಷಗಳಿಂದ ಕಾರ್ಯಕರ್ತರು ದೇವದುರ್ಲಬರಂತೆ ಪ್ರತಿಯೊಂದು ಕಾರ್ಯದಲ್ಲಿ ಶ್ರಮಿಸಿದ ಫಲವಾಗಿ ಕ್ಷೇತ್ರ ಅಭಿವೃದ್ಧಿಗೊಂಡು ಹತ್ತೂರಲ್ಲಿ ಹೆಸರುವಾಸಿಯಾಗಿದೆ ಮುಂದೆಯೂ ಸಹಕಾರ ಸದಾ ಇರಲಿ ಎಂದು ಹೇಳಿ ಕೖತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಸೇವಾ ಸಮಿತಿ ಉಪಾಧ್ಯಕ್ಷ ಸದಾನಂದ ರೖೆ ಬೋಳಂಕೂಡ್ಲು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾದಮೂಲೆ, ಜತೆ ಕಾರ್ಯದರ್ಶಿ ವಿನಯ ಕುಮಾರ್ ದೇವಸ್ಯ, ಕೋಶಾಧಿಕಾರಿ ಭಾಸ್ಕರ ಹೆಗಡೆ ಶಬರಿನಗರ, ಪ್ರಧಾನ ಪೂಜಾಕರ್ಮಿ ಮಾಧವ ಸಾಲಿಯಾನ್ ಮರದಮೂಲೆ ಉಪಸ್ಥಿತರಿದ್ದರು.
ಸಭೆಯಲ್ಲಿ ಸದಸ್ಯರುಗಳಾದ ಮಾಧವ ನಾಯಕ್ ಇಂದಾಜೆ,ಪ್ರವೀಣ್ ಮರದ ಮೂಲೆ, ರಾಜೇಶ್ ಸುಳ್ಯಪದವು, ಅಣ್ಣುಮೂಲ್ಯ ಗುರುಕಿರಣ್ ರೖೆ ಎನ್ ಜಿ, ಉದಯ ಕುಮಾರ್ ದೇವಸ್ಯ, ಚಂದ್ರಶೇಖರ ರೖೆ, ಬಾಬು ಪೂಜಾರಿ ಎಂ, ಚಂದ್ರಿಕಾ ಎಸ್, ಜಗದೀಶ್ ರೖೆ, ಅಶೋಕ್ ಬಿ, ರಮಾಕಾಂತಿ ಬೋಳಂಕೂಡ್ಲು, ವಿಮಾಲ ಶಬರಿನಗರ, ಮನ್ವಿತ್ ಎಸ್, ಮೋನಿಷಾ, ರಂಜಿತ್ ಎಂ, ರಾಘವ ಎನ್, ಈಶ್ವರ ನಾಯ್ಕ, ದಿನೇಶ ಎಂ, ವಿನೋದ್ ಸುವರ್ಣ, ರಮೇಶ್ ಎಸ್, ಕರುಣಾಕರ, ಮುದ್ದ, ನಯನ್ ಕುಮಾರ್, ರವಿ ಶಬರಿನಗರ, ಸುಂದರ ಪೂಜಾರಿ , ಚಂದ್ರಶೇಖರ ಡಿ, ಸತೀಶ್ ಎಂ, ಅಜಿತ್ ಕುಮಾರ್ ಕೆ, ರಜತ್ ಬೀರಮೂಲೆ, ಅಚ್ಚುತ ಡಿ, ಈಶ್ವರ ಮೖೆಕುಳಿ ಸತೀಶ್ ಬೀರಮೂಲೆ, ಶೇಸಪ್ಪ ನಾಯ್ಕ ಕೆ, ಬಾಬು ಶಬರಿನಗರ, ಚಂದ್ರ ಭಂಡಾರಿ, ವಿಶಾಲಾಕ್ಷಿ ರಾಘವ ಉಪಸ್ಥಿತರಿದ್ದರು.
2025-26ನೇ ಸಾಲಿನ ಕಾರ್ಯ-ಯೋಜನೆ
ಸ್ವಾಮಿ ಕೊರಗಜ್ಜ ಕ್ಷೇತ್ರದ ಎದುರು ಭಾಗದಲ್ಲಿ ಮುಖ್ಯದ್ವಾರ ನಿರ್ಮಾಣ ಹಾಗೂ ಪಾಕಶಾಲೆ ಎದುರು ಭಾಗಕ್ಕೆ ಶಾಶ್ವತ ಚಪ್ಪರ ನಿರ್ಮಾಣ ಮಾಡುವ ಬಗ್ಗೆ ಸಭೆಯಲ್ಲಿ ತಿರ್ಮಾನಿಸಲಾಯಿತು.
ಸಮಿತಿ ಮರು ಆಯ್ಕೆ
ಮುಂದಿನ ಮೂರು ವರ್ಷದ ಅವಧಿಗೆ ಸೇವಾ ಸಮಿತಿ ಪದಾಧಿಕಾರಿಗಳ ಮರು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಬೆಳಿಯಪ್ಷ ಗೌಡ ಶಬರಿನಗರ, ಉಪಾಧ್ಯಕ್ಷ ಸದಾನಂದ ರೖೆ ಬೋಳಂಕೂಡ್ಲು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ರದಮೂಲೆ, ಜತೆ ಕಾರ್ಯದರ್ಶಿ ವಿನಯ ಕುಮಾರ್ ದೇವಸ್ಯ, ಕೋಶಾಧಿಕಾರಿ ಭಾಸ್ಕರ ಹೆಗಡೆ ಶಬರಿನಗರ, ಪ್ರಧಾನ ಪೂಜಾಕರ್ಮಿ ಮಾಧವ ಸಾಲಿಯಾನ್ ಮರದಮೂಲೆರನ್ನು ಮರು ಆಯ್ಕೆ ಮಾಡಲಾಯಿತು.