ಪನಡ್ಕ ಸರಸ್ವತಿ ರೈ ಚೆಲ್ಯಡ್ಕರವರಿಗೆ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ನಿಧನರಾದ ಪನಡ್ಕ ಸರಸ್ವತಿ ರೈ ಚೆಲ್ಯಡ್ಕರವರಿಗೆ ಶ್ರದ್ಧಾಂಜಲಿ ಸಭೆಯು ಎ.28ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.
ನುಡಿ ನಮನ ಸಲ್ಲಿಸಿದ ಬಾಲಕೃಷ್ಣ ಆಳ್ವ ಕೊಡಾಜೆಯವರು ಮಾತನಾಡಿ, ಹುಟ್ಟು ಆಕಸ್ಮಿಕ. ಸಾವು ನಿಶ್ಚಿತ. ಎಷ್ಟು ವರ್ಷ ಜೀವಿಸಿದ್ದೇವೆ ಎನ್ನುವುದಕ್ಕಿಂತ ಹೆಚ್ಚು ಜೀವತವಾಧಿಯಲ್ಲಿ ಮಾಡಿದ ಸಾಧನೆ, ಉತ್ತಮ ಸೇವಾ ಕಾರ್ಯಗಳು ಶಾಶ್ವತ. ಸರಸ್ವತಿ ರೈಯವರು ಮಾದರಿ ಜೀವನ ನಡೆಸುವ ಮೂಲಕ ಮಹಿಳಾ ಸಮಾಜಕ್ಕೆ ಅನುಕರಣೀಯರಾಗಿದ್ದಾರೆ ಎಂದರು.

ದ.ಕ ಹಾಲು ಒಕ್ಕೂಟದ ಮಾಜಿ ಉಪಾಧ್ಯಕ್ಷರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿರುವ ಎಸ್.ಬಿ ಜಯರಾಮ ರೈ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಉದ್ಯಮಿಗಳಾದ ಉಮೇಶ್ ನಾಡಾಜೆ, ಶಿವರಾಮ ಆಳ್ವ, ಸಂತೋಷ್ ರೈ ನಳೀಲು, ಯತೀಶ್ ರೈ ಚೆಲ್ಯಡ್ಕ, ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಇರ್ದೆಶ್ರೀವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟುಗುತ್ತು, ರವೀಂದ್ರ ಶೆಟ್ಟಿ ನುಳಿಯಾಲು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ಗಂಗಾಧರ ಶೆಟ್ಟಿ ಪನಡ್ಕ, ರಂಗನಾಥ ರೈ ಗುತ್ತು ಸೇರಿದಂತೆ ಹಲವು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here