ಹಜ್‌ಗೆ ತೆರಳುವವರನ್ನು ಬೀಳ್ಕೊಡುವುದು ಪುಣ್ಯದ ಕಾರ್ಯ-ಹುಸೈನ್ ದಾರಿಮಿ
ಪುತ್ತೂರು: ಈ ವರ್ಷದ ಹಜ್ ಯಾತ್ರೆ ಕೈಗೊಳ್ಳುತ್ತಿರುವ ಯಾತ್ರಾರ್ಥಿಗಳಿಗೆ ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ವತಿಯಿಂದ ಬೀಳ್ಕೊಡುಗೆ ಕಾಯಕ್ರಮ ಎ.30ರಂದು ನಡೆಯಿತು. ಹಜ್ ಯಾತ್ರೆಗೆ ತೆರಳಲಿರುವ ಉಮರ್ ಮುಸ್ಲಿಯಾರ್ ನಂಜೆ, ಝೈನುದ್ದೀನ್ ಹಾಜಿ ಜೆ.ಎಸ್, ಅಬ್ದುಲ್ಲ ಕುಂತೂರು, ಕರೀಂ ದಾರಿಮಿ, ಹಬೀಬ್ ಸುಲ್ತಾನ್ ಬಾಳಾಯ, ಯೂಸುಫ್ ಗಟ್ಟಮನೆ, ಝುಬೈರ್ ನಂಜೆ ಮೊದಲಾದವರಿಗೆ ಬೀಳ್ಕೊಡುಗೆ ಮಾಡಲಾಯಿತು.
ಆರ್.ಐ.ಸಿ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ಹಜ್ ಕರ್ಮ ನಿರ್ವಹಿಸುವುದು ಈ ಭೂಮಿಯ ಮೇಲಿನ ಅತೀ ದೊಡ್ಡ ಸೌಭಾಗ್ಯವಾಗಿದ್ದು ಹಜ್ ನಿರ್ವಹಿಸಿದವರು ಪುಣ್ಯವಂತರು, ಅಷ್ಟೊಂದು ಪ್ರಾಧಾನ್ಯತೆ ಮತ್ತು ಶ್ರೇಷ್ಠತೆ ಇರುವ ಹಜ್‌ಗೆ ತೆರಳುವವರನ್ನು ಬೀಳ್ಕೊಡುವುದು ಕೂಡಾ ಪುಣ್ಯದ ಕಾರ್ಯವಾಗಿದೆ ಎಂದು ಅವರು ಹೇಳಿದರು.
ಅನ್ವರ್ ಮುಸ್ಲಿಯಾರ್, ರೆಂಜಲಾಡಿ ಮಸೀದಿ ಖತೀಬ್ ನಾಸಿರ್ ಫೈಝಿ, ಕರೀಂ ದಾರಿಮಿ, ಉಮ್ಮರ್ ಸುಲ್ತಾನ್ ರೆಂಜಲಾಡಿ ಮೊದಲಾದವರು ಮಾತನಾಡಿದರು. ಪಿ.ಕೆ ಮಹಮ್ಮದ್ ಕೂಡುರಸ್ತೆ, ಇಬ್ರಾಹಿಂ ಕಡ್ಯ, ರಹೀಂ ರೆಂಜಲಾಡಿ, ಅಝೀಝ್ ರೆಂಜಲಾಡಿ, ಇಬ್ರಾಹಿಂ ರೆಂಜಲಾಡಿ, ಝುಬೈರ್ ಕುಂತೂರು ಉಪಸ್ಥಿತರಿದ್ದರು. ಯೂಸುಫ್ ರೆಂಜಲಾಡಿ ವಂದಿಸಿದರು.
