ಕಬಕ ಗ್ರಾಮದ ಈಶ್ವರ ನಾಪತ್ತೆ

0

ವಿಟ್ಲ: ವ್ಯಕ್ತಿಯೋರ್ವರು ನಾಪತ್ತೆಯಾದ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಬಕ ಗ್ರಾಮದ ಕುಳ, ಶೇಖೆಹಿತ್ಲು ನಿವಾಸಿ, ಕೂಲಿ ಕೆಲಸ ಮಾಡಿಕೊಂಡಿದ್ದ ಈಶ್ವರ (45ವ) ನಾಪತ್ತೆಯಾದವರು.

ಈಶ್ವರ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಸುಮಾರು 2 ವರುಷಗಳಿಂದ ಅವರಿಗೆ ಕಿವಿ ಸರಿಯಾಗಿ ಕೇಳಿಸದೇ ಇದ್ದು, ಮಾನಸಿಕ ಅಸ್ವಸ್ಥರಂತಿದ್ದರು. ಸೆ.16ರಂದು ಮಧ್ಯಾಹ್ನ ಮನೆಯಿಂದ ತೆರಳಿದವರು, ಅದೇ ದಿನ ರಾತ್ರಿ ಕಬಕ ಪೇಟೆಯಲ್ಲಿ ಇದ್ದು, ಬಳಿಕ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ ಎಂದು ಅವರ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಠಾಣೆಗೆ ಸಂಪರ್ಕಿಸುವಂತೆ ಇಲಾಖಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here