ಬೆಂಗಳೂರು ‘ನಮ್ಮ ಕಂಬಳ’ ಸದಸ್ಯ, ಪಡ್ನೂರು ಮತಾವು ನಿವಾಸಿ ಪುತ್ತೂರು ಭರತ್ ಹೃದಯಾಘಾತದಿಂದ ನಿಧನ

0

ಪುತ್ತೂರು: ಬೆಂಗಳೂರಿನಲ್ಲಿ ನಡೆದ ‘ ನಮ್ಮ ಕಂಬಳ’ ದ ಸದಸ್ಯ ಪಡ್ನೂರು ಗ್ರಾಮದ ಮತಾವು ದಿ| ಹರೀಶ ಗೌಡ ಮತ್ತು ಜಯಂತಿ ದಂಪತಿಯ ಹಿರಿಯ ಪುತ್ರ ಭರತ್ ಮತಾವು (43ವ)  ಮೇ 1 ರಂದು ರಾತ್ರಿ  ಹೃದಯಾಘಾತದಿಂದ ನಿಧನರಾದರು.

ಭರತ್ ಅವರು ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದು ಸ್ವಯಂ ಉದ್ಯೋಗ ನಡೆಸುತ್ತಿದ್ದರು. ಅಲ್ಲಿ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಮೇಲೊಬ್ಬ ಮಾಯಾವಿ – ಪುತ್ತೂರು ಭರತ್:
ಸಿನಿಮಾ ರಂಗದಲ್ಲೂ ಸಕ್ರಿಯರಾಗಿದ್ದ ಅವರು ‘ಮೇಲೊಬ್ಬ ಮಾಯಾವಿ’ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿ ಹೆಸರು ಮಾಡಿದ್ದರು. ಅಲ್ಲಿ ‘ಪುತ್ತೂರು ಭರತ್’ ಎಂದೇ ಜನಪ್ರಿಯರಾಗಿದ್ದರು. ಪುತ್ತೂರಿನ ಮಾಡಾವು ಬಳಿಯಲ್ಲೂ ಚಿತ್ರೀಕರಣಗೊಂಡಿದ್ದ ಆ ಚಿತ್ರ ಪುತ್ತೂರಿನ ಚಿತ್ರಮಂದಿರದಲ್ಲೂ  ಪ್ರದರ್ಶನ ಕಂಡಿತ್ತು.

ಮೃತ ಭರತ್ ಅವರು ತಾಯಿ ಜಯಂತಿ, ಪತ್ನಿ ರವಿಕಲಾ, ಪುತ್ರ ನಿಹಾರ್ ಮತ್ತು ಪುತ್ರಿ ಹಂಸಿಕಾ, ತಮ್ಮ ಆದರ್ಶ, ತಂಗಿ ಸೌಮ್ಯಾ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here