ಪುತ್ತೂರು: ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢ ಶಾಲಾ ವಿಭಾಗದಿಂದ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ 39 ವಿದ್ಯಾರ್ಥಿಗಳಲ್ಲಿ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ 97.43 ಶೇಕಡಾ ಫಲಿತಾಂಶವನ್ನು ಪಡೆದುಕೊಡಿದೆ.
ಆಯಿಷತ್ ಅಝೀನಾ (612), ಫಾತಿಮ್ಮತ್ ಹಾದ (607), ಪ್ರಣ್ಯ (594),ಜಿ.ಎ, ಅಫಾ (584) ಕೃತಿಕಾ (568), ಅಬ್ದುಲ್ ಜುನೈದ್ (562), ಪಿ.ಬಿ.ಫಾತಿಮ್ಮತ್ ರಾಫಿಅ(561),ಶಾಂಭವಿ ಎನ್. (559) ಹಾಗೂ ಆಯಿಷತ್ ರಾಝಿಕಾ (543) ಅಂಕಗಳೊಂದಿಗೆ ಒಟ್ಟು 09 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ,23 ವಿದ್ಯಾರ್ಥಿಗಳು ಪ್ರಥಮಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡು 84.20 ಗುಣಾತ್ಮಕ ಅಂಕಗಳೊಂದಿಗೆ ಶಾಲೆಯು ಎ ಗ್ರೇಡ್ ಪಡೆದುಕೊಂಡಿದೆ ಎಂದು ಶಾಲಾ ಮುಖ್ಯಗುರುಗಳ ಪ್ರಕಟಣೆ ತಿಳಿಸಿದೆ.